Widgets Magazine

ಭಾರತದಲ್ಲಿ 10000 ರೂ.ಗೆ ಸಿಗಲಿದೆ ಐಫೋನ್

bengaluru| venu| Last Modified ಶನಿವಾರ, 18 ಫೆಬ್ರವರಿ 2017 (11:57 IST)
ಭಾರತದಲ್ಲಿ ಐಪೋನ್ ಇಂದಿಗೂ ಕೊಳ್ಳುವುದು ತುಂಬಾ ದುಬಾರಿ. ಆಪಲ್ ಸಂಸ್ಥೆಯ ಅಗ್ಗದ ಮೊಬೈಲ್ ಎನ್ನಲಾಗುವ ಐಫೋನ್ ಎಸ್`ಸಿ ಸಹ 39 ಸಾವಿರ ಇದೆ. ಹೀಗಾಗಿ, ಮಧ್ಯಮ ವರ್ಗದ ಜನರಿಗೆ ಐಫೋನ್ ಖರೀದಿ ಕಷ್ಟ. ಆದರೆ, ಮುಂದಿನ ಕೆಳ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲಲ್ಲಿ ಐಫೋನ್ ಅತ್ಯಂತ ಅಗ್ಗದ ಬೆಲೆಗೆ ಸಿಗುವ ಎಲ್ಲ ಸಾಧ್ಯತೆ ಇದೆ.


ಶೀಘ್ರದಲ್ಲೇ ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ ಉತ್ಪಾದನಾ ಕೇಂದ್ರ ರಂಭವಾಗಲಿದ್ದು, ಸರ್ಕಾರದಿಂದ ಭಾರೀ ಪ್ರಮಾಣದ ತೆರಿಗೆ ವಿನಾಯ್ತಿ ಸಿಕ್ಕಿದೆ. ಹೀಗಾಗಿ, ಮಾರುಕಟ್ಟೆಗೆ ಬರುವ ಮೊಬೈಲ್ ಬೆಲೆಯೂ ಕಡಿಮೆಯಾಗಲಿದೆ. ದೇಶೀಯ ತ್ಪಾದನೆಯಾದ್ದರಿಂದ ಉತ್ಪಾದನಾ ವೆಚ್ಚ ಲ್ಲವೂ ಕಡಿಮೆ. ಹೀಗಾಗಿ, ಊಹೆಗೆ ಅಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಐಫೋನ್ ಳಬ್ಯವಾಗಲಿದೆಯಂತೆ.

2016-17ರಲ್ಲಿ ಆಫಲ್ ಸಂಸ್ಥೆ 1 ಕೋಟಿ ಫೋನ್ ಮಾರುವ ದ್ದೆಶ ಹೊಂದಿದ್ದು, ಇದರಲ್ಲಿ ಶೇ. 70-80ರಷ್ಟು ಐಫೋನ್`ಗಳು 10 ಸಾವಿರಕ್ಕೂ ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಸ್ಯಾಮ್ಸಂಗ್, ಷಿಯಾಮಿ, ವಿವೋ ಸಂಸ್ಥೆಗಳು ಪಾರುಪತ್ಯ ಸಾಧಿಸಿದ್ದು, ಈ ಕಂಪನಿಗಳ 15 ಸಾವಿರಕ್ಕು ಒಳಗಿನ ಮೊಬೈಲ್`ಗಳು ಭಾರೀ ಪ್ರಮಾನದಲ್ಲಿ ಸೇಲ್ ಆಗುತ್ತಿವೆ. ಹೀಗಾಗಿ, ಅಗ್ಗದ ಬೆಲೆಯ ಫೋನ್ ಮೂಲಕ ಮಾರುಕಟ್ಟೆಗೆ ಪ್ರವೆಶ ಪಡೆಯುವುದು ಆಪಲ್ ತಂತ್ರ. ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :