Widgets Magazine

ಆಭರಣ ವ್ಯಾಪಾರಿಗಳಿಗೆ ಪ್ರಧಾನಿ ಮೋದಿ ಬಿಗ್ ರಿಲೀಫ್

ನವದೆಹಲಿ| Rajesh patil| Last Modified ಶುಕ್ರವಾರ, 6 ಅಕ್ಟೋಬರ್ 2017 (18:29 IST)
ಆಭರಣ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಗ್ ರಿಲೀಫ್ ನೀಡಿದ್ದಾರೆ  
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಧಿಸೂಚನೆ ಹಿಂಪಡೆದ ಚಿನ್ನಾಭರಣ ವ್ಯಾಪಾರಿಗಳಿಗೆ ಬಿಗ್ ರಿಲೀಫ್ ನೀಡಿದೆ.
 
ಕೇಂದ್ರ ಸರಕಾರ ಜಿಎಸ್‌ಟಿ ಚಿನ್ನಾಭರಣ ವಹಿವಾಟಿನ ಮೇಲೆ ಹಿಂದೆ ಕಳುಹಿಸಿದ್ದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು ಸರಕಾರ ಹಿಂಪಡೆದಿದೆ. ಕೇಂದ್ರ ಸರಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದ ವರ್ತಕರಿಗೆ ಇದೀಗ ಕೊಂಚಮಟ್ಟಿನ ನಿರಾಳತೆ ದೊರೆತಿದೆ ಎನ್ನಲಾಗುತ್ತಿದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ, ವಿತ್ತಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಆಭರಣ ವಹಿವಾಟುದಾರರಿಗೆ ರಿಲೀಫ್ ನೀಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.  
 
ಗುಜರಾತ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮತದಾರರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವ ಆತಂಕ ಕೂಡಾ ಬಿಗ್ ರಿಲೀಫ್ ನೀಡಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :