ರಿಲಾಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿ ಹಲವು ದಿನಗಳ ನಿರೀಕ್ಷಿತ ರಿಲಯನ್ಸ್ ಜಿಯೋ 4ಜಿ ಸೇವೆಯನ್ನು ಗುರುವಾರ ಅನಾವರಣಗೊಳಿಸಿದ್ದಾರೆ. ಕಂಪೆನಿಯ 4ಜಿ ಎಲ್ಟಿಇ ನೆಟ್ವರ್ಕ್ ಜಗತ್ತಿನಲ್ಲಿ ಅತೀ ದೊಡ್ಡದು ಎಂದು ತಿಳಿಸಿದ್ದಾರೆ. ಜಿಯೋ 4ಜಿ ಸೇವೆ ಬಿಡುಗಡೆ ಮಾಡುವ ಮೂಲಕ ರಿಲಯನ್ಸ್ ಟೆಲಿಕಾಂ ಸಂಸ್ಥೆ, ವೈಸ್ ಕರೆಗಳು ಸೇರಿದಂತೆ ಅಪ್ಲಿಕೇಶನ್, 4ಜಿ ಸೇವೆ ಹಾಗೂ ವಿವಿಧ ಸೌಲಭ್ಯಗಳನ್ನು ಸೆಪ್ಟೆಂಬರ್ 5 ರಿಂದ ಡಿಸೆಂಬರ್ 31ರವರೆಗೂ ಉಚಿತವಾಗಿ ನೀಡಲಿದೆ.