ಉಚಿತ ಕರೆ, ಅನಿಯಮಿತ ಡಾಟಾ ಪ್ಲಾನ್ನೊಂದಿಗೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ರಿಯಲಯನ್ಸ್ ಜಿಯೋ ತನ್ನ ಉಚಿತ ಸೇವೆಗಳನ್ನು ಮಾರ್ಚ್ವರೆಗೂ ವಿಸ್ತರಿಸಿದ್ದು ಗೊತ್ತಿರುವ ಸಂಗತಿ. ಡಿಸೆಂಬರ್ಗೆ ಮುಗಿಯಲಿರುವ ಪ್ಲಾನನ್ನು ಹ್ಯಾಪಿ ನ್ಯೂ ಇಯರ್ ಆಫರ್ನೊಂದಿಗೆ ಮುಂದುವರಿಸಲಿದೆ. ಈ ಹಿನ್ನೆಲೆಯಲ್ಲಿ ಜಿಯೋ ಮತ್ತೊಂದು ಭರ್ಜರಿ ಪ್ರಕಟಣೆ ಮಾಡುವ ನಿರೀಕ್ಷೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಮಾರ್ಚ್ ಬಳಿಕ ಸಹ ಇನ್ನಷ್ಟು ದಿನ ಉಚಿತ ಸೇವೆಯನ್ನು ವಿಸ್ತರಿಸಬಹುದು ಎಂದು ಭಾವಿಸಿದ್ದಾರೆ.