ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಸ್ಕೀಮ್ ವೊಂದನ್ನು ಆರಂಭಿಸುತ್ತಿದ್ದು, ಅದು ಇಂದಿನಿಂದ ಲಭ್ಯವಾಗಲಿದೆ. ಈ ಜಿಯೊಫೋನ್ ಮಾನ್ಸೂನ್ ಹಂಗಮಾ ಆಫರ್ ಅಡಿಯಲ್ಲಿ, ಗ್ರಾಹಕರು ಯಾವುದೇ ಬ್ರಾಂಡ್ ನ ಹಳೆಯ ಫೀಚರ್ ಫೋನ್ ಗಳನ್ನು ರೂ. 501ಕ್ಕೆ ಬದಲಾಯಿಸಿ ಹೊಸ ಜಿಯೋಫೋನ್ ಪಡೆದುಕೊಳ್ಳುವ ಆಯ್ಕೆ ನೀಡಿದೆ. ಅಂದರೆ ಹಳೆಯ ಫೀಚರ್ ಫೋನ್ ಜೊತೆ ರೂ.501 ಪಾವತಿಸಿ ಹೊಸ ಜಿಯೋಫೋನ್2 ಖರೀದಿಸಬಹುದು.