Widgets Magazine

ಮುಂದಿನ ವರ್ಷಕ್ಕೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆಯಾ ಶಾಕ್?!

ನವದೆಹಲಿ| Krishnaveni| Last Modified ಮಂಗಳವಾರ, 12 ಡಿಸೆಂಬರ್ 2017 (09:09 IST)
ನವದೆಹಲಿ: ದೇಶಾದ್ಯಂತ ಅಗ್ಗದ ಬೆಲೆಗೆ 4 ಜಿ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಿದ್ದ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಗ್ರಾಹಕರಿಗೆ ಮುಂದಿನ ವರ್ಷಕ್ಕೆ ನಿರಾಸೆ ಮಾಡಲಿದೆಯಾ?

ಹಾಗೊಂದು ಸಾಧ್ಯತೆ ಹುಟ್ಟಿಕೊಂಡಿದೆ. ಈಗಾಗಲೇ ಕಡಿಮೆ ದರದಲ್ಲಿ ಉಚಿತ ಡಾಟಾ, ಕರೆ ನೀಡಿ ಜನಪ್ರಿಯವಾಗಿರುವ ಜಿಯೋ ಸಂಸ್ಥೆಗೆ ಸಾಕಷ್ಟು ಗ್ರಾಹಕರು ಸೇರ್ಪಡೆಯಾಗಿದ್ದಾರೆ.ಆದರೆ ಮುಂದಿನ ವರ್ಷದಿಂದ ರಿಲಯನ್ಸ್ ಸಂಸ್ಥೆ ತನ್ನ 4 ಜಿ ಸೇವೆ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮೂಲಗಳು ಸುಳಿವು ನೀಡಿವೆ. ಹೀಗಾದರೆ, ಈಗಾಗಲೇ ರಿಲಯನ್ಸ್ ಜಿಯೋ ಸೇವೆ ಒಗ್ಗಿಕೊಂಡಿರುವ ಗ್ರಾಹಕರಿಗೆ ನಿಜಕ್ಕೂ ನಿರಾಶೆಯಾಗಲಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :