ಈಗಾಗಲೆ ಆರು ತಿಂಗಳಿಂದ ಉಚಿತ ಕರೆ, ಡಾಟಾ ಸೇವೆಗಳನ್ನು ನೀಡುತ್ತಿರುವ ರಿಲಯನ್ಸ್ ಜಿಯೋ ತನ್ನ ಆಫರನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಿದೆಯಾ? ಹೌದು ಎನ್ನುತ್ತಿವೆ ವಿಶ್ವಸನೀಯ ಮೂಲಗಳು. ಮುಂದಿನ ಮೂರು ತಿಂಗಳು ಕೊಡಲಿರುವ ಉಚಿತ ಸೇವೆಗೆ ನಾಮಮಾತ್ರ ಶುಲ್ಕ ವಿಧಿಸಲು ಮುಂದಾಗಿದೆಯಂತೆ ಕಂಪೆನಿ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ವೆಲ್ ಕಮ್ ಆಫರ್ ಹೆಸರಿನಲ್ಲಿ ಉಚಿತ ಸೇವೆಗಳನ್ನು ಪ್ರಾರಂಭಿಸಿದ್ದು ಗೊತ್ತೇ ಇದೆ. ಆ ಬಳಿಕ ಹ್ಯಾಪಿ ನ್ಯೂ