Widgets Magazine

ಏರ್‌ಟೆಲ್‌ಗೆ ಭಾರಿ ದಂಡ ವಿಧಿಸಿ ಎಂದ ರಿಲಯನ್ಸ್ ಜಿಯೋ

New Delhi| Rajendra| Last Modified ಸೋಮವಾರ, 30 ಜನವರಿ 2017 (14:21 IST)
ಗ್ರಾಹಕರಿಗೆ ತಪ್ಪು ದಾರಿ ಹಿಡಿಯುವಂತೆ ಭಾರತಿ ಏರ್‌ಟೆಲ್ ಜಾಹೀರಾತುಗಳನ್ನು ನೀಡುತ್ತಿದೆ ಎಂದು ರಿಲಯನ್ಸ್ ಜಿಯೋ ಕಂಪೆನಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ದೂರು ನೀಡಿದೆ. ಪ್ರಮೋಷನ್ ಆಫರ್‌ನಲ್ಲಿ ಕೊಡುವ ಡಾಟಾ ಬಗ್ಗೆ ಏರ್‌ಟೆಲ್ ಅತಿ ಹೆಚ್ಚು ಪ್ರಚಾರ ನೀಡುತ್ತಿದೆ ಎಂದು, ಅಡ್ಡದಾರಿ ಹಿಡಿಯುವಂತೆ ದರಪಟ್ಟಿಯನ್ನು ಪ್ರಕಟಿಸುತ್ತಿದೆ ಎಂದು ರಿಲಯನ್ಸ್ ಜಿಯೋ ಆರೋಪಿಸಿದೆ.

ಹಾಗಾಗಿ ಏರ್‌ಟೆಲ್‍ಗೆ ಭಾರಿ ದಂಡ ವಿಧಿಸಬೇಕೆಂದು ಜಿಯೋ ದೂರು ನೀಡಿದೆ. ಫ್ರೀ ಯೂಸೇಜ್ ಪಾಲಿಸಿ (ಎಫ್‌ಯೂಪಿ) ಬಗ್ಗೆ ಜಾಹೀರಾತುಗಳಲ್ಲಿ ಏರ್‌ಟೆಲ್ ಕಂಪೆನಿ ಎಲ್ಲೂ ಪ್ರಸ್ತಾವನೆ ಮಾಡುತ್ತಿಲ್ಲವೆಂದು. ಯಾರಾದರೂ ಫೋನ್ ಮಾಡಿದರೆ ಮಾತ್ರ ಕಾಲ್‌ಸೆಂಟರ್‌ನಲ್ಲಿ ವಿವರಣೆ ನೀಡುತ್ತಿದ್ದಾರೆಂದು ಹೇಳಿದೆ. ಇದು ಟ್ರಾಯ್ ನಿಬಂಧನೆಗಳ ಉಲ್ಲಂಘನೆಯೆಂದು ಜಿಯೋ ಆರೋಪಿಸಿದೆ.

ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ನಡುವೆ ಮುಸುಕಿನ ಗುದ್ದಾಟ ಆರಂಭದಿಂದಲೂ ನಡೆಯುತ್ತಿದೆ. ಇಷ್ಟು ದಿನ ಜಿಯೋ ಮೇಲೆ ಏರ್‌ಟೆಲ್ ಆರೋಪಿಸುತ್ತಿತ್ತು. ಈ ಸಂಬಂಧ ಟ್ರಾಯ್‌ಗೂ ದೂರು ನೀಡಿತ್ತು. ಈಗ ಏರ್‌‍ಟೆಲ್ ಮೇಲೆ ಜಿಯೋ ದೂರುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :