ಜೆರುಸಲೇಂ : ಭಾರತ ಮತ್ತು ಇಸ್ರೇಲ್ ನಡುವಿನ ಮುಕ್ತ ವಾಣಿಜ್ಯ ಒಪ್ಪಂದದ (ಎಫ್ ಟಿಎ)ಮಾತುಕತೆಯನ್ನು ಪುನರಾರಂಭಿಸಲು ಎರಡೂ ರಾಷ್ಟ್ರಗಳು ಒಪ್ಪಿವೆ. ಸದ್ಯಕ್ಕೆ ಇಸ್ರೇಲ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯ ತಿಳಿಸಿದ್ದಾರೆ. ಸೋಮವಾರ ಜೈಶಂಕರ್, ಇಸ್ರೇಲ್ನ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಯೈರ್ ಲಪಿಡ್ ಅವರನ್ನು ಭೇಟಿ ಮಾಡಿದರು. ಭೇಟಿಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ ಟಿಎ ಮಾತುಕತೆಯನ್ನು ಮರುಚಾಲನೆ ಗೊಳಿಸಲಾಗುತ್ತದೆ.