Widgets Magazine

ಪವರ್‌ಫುಲ್ ಸೌಲಭ್ಯಗಳೊಂದಿಗೆ ಸ್ಯಾಂಸಂಗ್ ಸ್ಮಾರ್ಟ್‌ಫೋನ್

New Delhi| Rajendra| Last Modified ಮಂಗಳವಾರ, 7 ಮಾರ್ಚ್ 2017 (11:46 IST)
ಪ್ರಮುಖ ಎಲಕ್ಟ್ರಾನಿಕ್ ಉತ್ಪನ್ನಗಳ ಸ್ಯಾಂಸಂಗ್ ಕಂಪೆನಿ ಮೊಬೈಲ್ ತಯಾರಿಕೆಯಲ್ಲಿ ತನ್ನದೇ ಆದಂತಹ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಅದಕ್ಕನುಗುಣವಾಗಿ ಕಾಲಕಾಲಕ್ಕೆ ಹೊಸ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.

ಇತ್ತೀಚೆಗೆ ಗ್ಯಾಲಕ್ಸಿ ಎ7, ಎ5 ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎ (2017) ಸೀರೀಸ್ ಮೂಲಕ ಅತ್ಯಾಧುನಿಕ, ವಿನೂತನ ವಿನ್ಯಾಸದ ಫೋನ್ ಬಿಡುಗಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಸ್ಯಾಂಸಂಗ್ ಇಂಡಿಯಾ ಹಿರಿಯ ಉಪಾಧ್ಯಕ್ಷ ಅಸಿಂ ವರ್ಸಿ ಮಾತನಾಡುತ್ತಾ, ನಮ್ಮ ಗ್ರಾಹಕರಿಗಾಗಿ ಅತ್ಯಾಧುನಿಕ ಮೊಬೈಲ್‌ಗಳನ್ನು ತರಲು ನಾವು ಯಾವತ್ತೂ ಮುಂದಿರುತ್ತೇವೆ ಎಂದಿದ್ದಾರೆ.

ಸದ್ಯಕ್ಕೆ ಬಿಡುಗಡೆ ಮಾಡಿರುವ ಫೋನ್‌ಗಳೂ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ. ಗ್ಯಾಲಾಕ್ಸಿ ಎ2017 ಸೀರೀಸ್‌ನ ಈ ಫೋನ್‌ಗಳು ನೀರು, ಧೂಳು ಬಿದ್ದರೂ ತಡೆದುಕೊಂಡು ಕಾರ್ಯನಿರ್ವಹಿಸಲಿವೆ. ಗ್ಯಾಲಕ್ಸಿ ಎ7 ಬೆಲೆ ರೂ.34,490, ಎ5 ಬೆಲೆ ರೂ.28,990.

ಗ್ಯಾಲಾಕ್ಸಿ ಎ7, ಎ5 ವಿಶೇಷತೆಗಳು
* 5.7 ಇಂಚಿನ ಫುಲ್‌ ಎಚ್‌ಡಿ ಸ್ಪರ್ಶಸಂವೇದಿ ಪರದೆ (ಎ7)
* 5.2 ಇಂಚಿನ ಸ್ಪರ್ಶ ಸಂವೇದಿ ಪರದೆ (ಎ5)
* ಡ್ಯುಯಲ್ ಸಿಮ್
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ
* 32 ಜಿಬಿ ಆಂತರಿಕ ಮೆಮೊರಿ
* 256 ಜಿಬಿವರೆಗೂ ಮೆಮೊರಿ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ
* ಫಿಂಗರ್ ಪ್ರಿಂಟ್ ಸ್ಕ್ಯಾನರ್
* 4ಜಿ ಎಲ್‍ಟಿಇ, ವಿವೋ ಎಲ್‍ಟಿಇ ಸಪೋರ್ಟ್
* 1.9 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* 3ಜಿಬಿ ರ‍್ಯಾಮ್
* 16 ಮೆಗಾ ಪಿಕ್ಸೆಲ್ ಮುಂಬದಿ, ಹಿಂಬದಿ ಕ್ಯಾಮೆರಾ
*
3600 ಎಂಎಎಚ್ ಬ್ಯಾಟರಿ (ಎ7)
* 3000 ಎಂಎಎಚ್ ಬ್ಯಾಟರಿ (ಎ5)

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :