Widgets Magazine

ಮಾರುಕಟ್ಟೆಗೆ ಹೊಸ ಸ್ಯಾಂಸಂಗ್ ಉತ್ಪನ್ನಗಳು

New Delhi| Rajendra| Last Modified ಶುಕ್ರವಾರ, 17 ಫೆಬ್ರವರಿ 2017 (13:23 IST)
ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಹಾಗೂ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಸ್ಯಾಂಸಂಗ್ ಇನ್ನೊಂದು ಅಡಿ ಮುಂದಿಟ್ಟಿದ್ದು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವ ಏರ್ ಕಂಡೀಷನರ್, ರಿಫ್ರಿಜರೇಟರ್‌ಗಳನ್ನು ಬಿಡುಗಡೆ ಮಾಡಿದೆ.

ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಯಾಂಸಂಗ್ ಇಂಡಿಯಾ ಗ್ರಾಹಕರ ಎಲೆಕ್ಟ್ರಾನಿಕ್ ನಿರ್ದೇಶಕ ರಿಷಿ ಸೂರಿ ಪಾಲ್ಗೊಂಡಿದ್ದರು. ಸೌರಶಕ್ತಿಯೊಂದಿಗೆ ಕೆಲಸ ಮಾಡುವ ಸ್ಮಾರ್ಟ್ ಕನ್ವರ್ಟಬಲ್ ಫ್ರಾಸ್ಟ್ ಫ್ರೀ, ಡೈರೆಕ್ಟ್ ರೆಫ್ರಿಜಿರೇಟರ್‌ಗಳು, ಡಿಜಿಟಲ್ ಶ್ರೇಣಿಯ ಇನ್ವರ್ಟರ್ ಟೆಕ್ನಾಲಜಿಯೊಂದಿಗೆ ಕೆಲಸ ಮಾಡುವ ಏರ್ ಕಂಡೀಷನರ್‌ಗಳನ್ನು ಅವರು ಬಿಡುಗಡೆ ಮಾಡಿದರು.

ಸೌರಶಕ್ತಿಯಿಂದ ಕೆಲಸ ಮಾಡುವ ಉತ್ಪನ್ನಗಳನ್ನು ಗ್ರಾಹಕರು ಎದುರು ನೋಡುತ್ತಿದ್ದರೆಂದಿರುವ ರಿಷಿ, ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಈ ನೂತನ ಗೃಹಬಳಕೆ ಉತ್ಪನ್ನಗಳು ಮಾರುಕಟ್ಟೆಯನ್ನು ಆಕರ್ಷಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :