Widgets Magazine

ಶಶಿಕಲಾ ಶಾಕ್‌ನಿಂದ ಅಬ್ಬರಿಸಿದ ಸನ್ ಟಿವಿ!

Chennai| Rajendra| Last Modified ಬುಧವಾರ, 15 ಫೆಬ್ರವರಿ 2017 (12:39 IST)
ಎಐಎಡಿಎಂಕೆ ಅಧಿನಾಯಕಿ ವಿ.ಕೆ ಶಶಿಕಲಾಗೆ ಸುಪ್ರೀಂಕೋರ್ಟ್ ಶಾಕ್ ಕೊಟ್ಟ ಹಿನ್ನೆಲೆಯಲ್ಲಿ ಸನ್ ಟಿವಿ, ರಾಜ್ ಟಿವಿ ಷೇರುಗಳು ಅಬ್ಬರಿಸಿ ಷೇರುಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿರುವ ಪ್ರಕರಣದಲ್ಲಿ ಶಶಿಕಲಾ ಅಪರಾಧಿ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಭಾರಿ ಬೇಡಿಕೆ ಉಂಟಾಗಿದೆ.

ಸನ್ ಟಿವಿ ಶೇ.4ರಷ್ಟು, ರಾಜ್ ಟಿವಿ ಶೇ.12ರಷ್ಟು ಏರಿಕೆ ಕಂಡಿವೆ. ಕೇಂದ್ರದ ಮಾಜಿ ಆರ್ಥಿಕ ಸಚಿವ ಮುರಸೋಲಿ ಮಾರನ್ ಪುತ್ರ, ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅಳಿಯನ ಮಗ ಕಳಾನಿಧಿ ಮಾರನ್ ಶೇ.75ರಷ್ಟು ಪಾಲು ಹೊಂದಿರುವ ಸನ್ ಟಿವಿ ಷೇರುಗಳು ಶೇ.4ರಷ್ಟು ಏರಿಕೆ ಕಂಡಿದೆ.

ಇನ್ನೊಂದು ಕಡೆ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಖುಲಾಸೆಯಾದ ಕಾರಣ ಸನ್ ಟಿವಿಗೆ ಭಾರಿ ಲಾಭವಾಗಿದೆ. ಇದೀಗ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದ ಶಶಿಕಲಾ ಅವರಿಗೆ ಸುಪ್ರೀಂ ನಾಲ್ಕು ವರ್ಷಗಳ ಕಾರಾಗಾರ ಶಿಕ್ಷೆ ವಿಧಿಸಿದ್ದು ಸನ್ ಟಿವಿ ಷೇರುಪೇಟೆಯಲ್ಲಿ ವಿಜೃಂಭಿಸಲು ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :