ಕ್ವಾಲಂ ಪ್ರೊಸೆಸರ್ ಬಳಸುತ್ತಿರುವ ಈ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ನವದೆಹಲಿ| pavithra| Last Modified ಗುರುವಾರ, 8 ಆಗಸ್ಟ್ 2019 (09:14 IST)
ನವದೆಹಲಿ : ಇತ್ತೀಚೆಗಷ್ಟೇ ಸ್ಮಾರ್ಟ್‌ ಫೋನ್‌ ಗಳಿಗೆ ಮಾಲ್ವೇರ್ ವೈರಸ್ ಗಳಿಂದ ಸಮಸ್ಯೆ ಎದುರಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಕ್ವಾಲಂ ಕಂಪೆನಿ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಗಳಿಗೆ ಸಂಬಂಧಪಟ್ಟ ಮತ್ತೊಂದು ಶಾಕಿಂಗ್ ವಿಚಾರವೊಂದನ್ನು ಹೇಳಿದೆ.
ಹೌದು. ಕ್ವಾಲಂ ಪ್ರೊಸೆಸರ್ ಬಳಸುತ್ತಿರುವ ಹಲವು ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕಂಪನಿ ಹೇಳಿದೆ. ಅಲ್ಲದೇ ಈ ಸಮಸ್ಯೆಯಿಂದ ಪಾರಾಗಲು ಭದ್ರತಾ ಅಪ್‌ ಡೇಟ್ ನೀಡಲಾಗಿದ್ದು, ಹೀಗಾಗಿ ಗ್ರಾಹಕರು ಕೂಡಲೇ ಅಗತ್ಯ ಭದ್ರತಾ ಅಪ್‌ ಡೇಟ್ ಮಾಡಿಕೊಳ್ಳುವುದು ಸೂಕ್ತ ಎಂದು ತಿಳಿಸಿದೆ.


ಸಮಸ್ಯೆಯಾಗಿರುವ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌‌ ಗಳ ಮಾಹಿತಿ ಇಲ್ಲಿದೆ:
ಒನ್‌ ಪ್ಲಸ್ 6, ರಿಯಲ್‌ ಮಿ X, ಗೂಗಲ್ ಪಿಕ್ಸೆಲ್ 3A XL, ಗೂಗಲ್ ಪಿಕ್ಸೆಲ್ 3A, ಶವೋಮಿ ಪೋಕೋ F1, ಗೂಗಲ್ ಪಿಕ್ಸೆಲ್ 3, ಗೂಗಲ್ ಪಿಕ್ಸೆಲ್ 3ಎಕ್ಸ್ ಎಲ್, ನೋಕಿಯಾ 8 ಸಿರೋಕೊ, ವಿವೋ Z1 Pro, ಏಸಸ್ ಝೆನ್‌ಫೋನ್ 5Z, ರೆಡ್ಮಿ ನೋಟ್ 5 Pro, ನೋಕಿಯಾ 6.1 Plus, ಎಲ್‌ಜಿ V30+, ಎಲ್‌ಜಿ G7 ThinQ, ಏಸಸ್ ಮ್ಯಾಕ್ಸ್ ಪ್ರೊ M2, ಏಸಸ್ ಮ್ಯಾಕ್ಸ್ ಪ್ರೊ M1, ಒಪ್ಪೋ R17 Pro, ನೋಕಿಯಾ 8.1, ವಿವೋ ನೆಕ್ಸ್, ಎಂಐ A2, ರೆಡ್ಮಿ ನೋಟ್ 7 Pro, ರೆಡ್ಮಿ 6 Pro, ವಿವೋ V15 Pro, ಸ್ಯಾಮ್‌ ಸಂಗ್ A70, ಸ್ಯಾಮ್‌ ಸಂಗ್ M40, ಒನ್‌ ಪ್ಲಸ್ 7, ಒನ್‌ ಪ್ಲಸ್ 7 ಪ್ರೊ, ಒಪ್ಪೋ ರೆನೊ, ಏಸಸ್ 6Z, ನುಬಿಯಾ ರೆಡ್ ಮ್ಯಾಜಿಕ್ 3, ಬ್ಲ್ಯಾಕ್ ಶಾರ್ಕ್ 2, ರೆಡ್ಮಿ K20 Pro, ಒನ್‌ ಪ್ಲಸ್ 6T.

ಇದರಲ್ಲಿ ಇನ್ನಷ್ಟು ಓದಿ :