Widgets Magazine

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್; ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಏರಿಕೆ

ಬೆಂಗಳೂರು| pavithra| Last Modified ಶನಿವಾರ, 5 ಜನವರಿ 2019 (10:56 IST)
ಬೆಂಗಳೂರು : ಕಳೆದ 10 ವಾರಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಇಳಿಕೆಯಾಗುತ್ತಿದ್ದ ಕಾರಣ
ಸರ್ಕಾರದ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಈ
ಹಿನ್ನಲೆಯಲ್ಲಿ ಇದೀಗ ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಏರಿಕೆ ಮಾಡಲಾಗಿದೆ.ರಾಜ್ಯ ತೆರಿಗೆ ಏರಿಕೆ ಮಾಡಿದ್ದು ಇದರಿಂದ ಪೆಟ್ರೋಲ್ ದರ ರೂ.1.14 ಮತ್ತು ಡೀಸೆಲ್‌ ಬೆಲೆ ರೂ.1.12 ಹೆಚ್ಚಳವಾಗಿದೆ.
ಹಾಗೇ
ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.32 ಕ್ಕೆ ಏರಿಕೆ ಮಾಡಲಾಗಿದ್ದು, ಡೀಸೆಲ್ ಶೇ.21ಕ್ಕೆ ಏರಿಕೆ ಮಾಡಲಾಗಿದೆ.


ರಾಜ್ಯದಲ್ಲಿ ಈಗ ಪೆಟ್ರೋಲ್ ಪ್ರತಿ ಲೀಟರ್ ಗೆ 70.84 ರೂಪಾಯಿ, ಡೀಸೆಲ್ ದರ ಪ್ರತಿ ಲೀಟರ್ ಗೆ 64.66 ರೂಪಾಯಿಗಳಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :