ಶಾಕಿಂಗ್ ನ್ಯೂಸ್! ಕೂಡಲೇ ನೂತನ ವಾಟ್ಸ್ ​ಆ್ಯಪ್​ ವರ್ಶನ್​​ ಅಪ್ ​​ಡೇಟ್​ ಮಾಡಿಕೊಳ್ಳಿ

ಬೆಂಗಳೂರು, ಬುಧವಾರ, 15 ಮೇ 2019 (06:43 IST)

ಬೆಂಗಳೂರು : ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ಸೇಫ್ ಎಂದುಕೊಂಡಿದ್ದ ವಾಟ್ಸ್​ ಆ್ಯಪ್​​​ ಮೂಲಕವೂ ಹ್ಯಾಕರ್ ​​ಗಳು ನಮ್ಮ  ವೈಯಕ್ತಿಕ ಡೇಟಾವನ್ನು ಕದಿಯುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ನಮ್ಮ ವೈಯಕ್ತಿಕ ಡೇಟಾ ಸುರಕ್ಷಿತವಾಗಿರಿಸಲು ವಾಟ್ಸ್ ​​ಆ್ಯಪ್​​​ ತುಂಬಾ  ಸಹಕಾರಿ ಎಂದು ತಜ್ಞರು ಹೇಳುತ್ತಿದ್ದರು. ಅಲ್ಲದೇ ಕೊನೆಯವರೆಗೂ ನಮ್ಮ ಪರ್ಸನಲ್​ ಡಾಟಾ, ವಿಡಿಯೋ ಮತ್ತು ಪೋಟೋಸ್, ಮೆಸೇಜ್​ಗಳನ್ನು​​ ವಾಟ್ಸ್​​ಆ್ಯಪ್​​​ ಸಂಸ್ಥೆ ಭದ್ರವಾಗಿ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು.


ಆದರೆ ಇತ್ತೀಚೆಗೆ ಇಸ್ರೇಲ್​ ಮೂಲದ ಎನ್​.ಎಸ್.​ಒ ಎಂಬ ಕಂಪನಿ ಡಾಟಾ ಕಳವು ಬಗ್ಗೆ ವ್ಯಾಟ್ಸ್​​ಆ್ಯಪ್​​ ಸಂಸ್ಥೆಗೆ ಮಾಹಿತಿ ನೀಡಿದ್ದು, ಕರೆಯ ಮೂಲಕ ಬಳಕೆದಾರನ ವ್ಯಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ತಿಳಿಸಿದೆ. ವಾಟ್ಸ್​ಆ್ಯಪ್​ ವರ್ಶನ್​​ V2.19.134, ಬ್ಯುಸಿನಸ್​​ v2.19.44, ವಾಟ್ಸ್​ಆ್ಯಪ್ iOS v2.19.51, ವಾಟ್ಸ್​ಆ್ಯಪ್ ಬ್ಯುಸಿನೆಸ್ iOS v2.19.51, ವಾಟ್ಸ್​ಆ್ಯಪ್​ ವಿಂಡೋಸ್​  v2.18.348, ವಾಟ್ಸ್​ಆ್ಯಪ್​​ ಟೈಝೆನ್​ v2.18.15 ವರ್ಶನ್​​ ಗಳಲ್ಲಿ ಮಾಹಿತಿ ಕದಿಯಲಾಗುತ್ತಿದೆ ಎಂದು ಇಸ್ರೇಲ್​​ ಕಂಪನಿ ತಿಳಿಸಿದೆ.


ಆದ್ದರಿಂದ ವಾಟ್ಸ್​ಆ್ಯಪ್​ ಸಂಸ್ಥೆ ಇದೇ ಮೇ.10ರಂದು iOS ಮತ್ತು ಆ್ಯಂಡ್ರಾಯ್ಡ್​ ಬಳಕೆದಾರಿಗೆ ಅಪ್​ಡೇಟ್​ ವರ್ಷನ್​ ಬಿಡುಗಡೆ ಮಾಡಿದೆ. ಬಳಕೆದಾರರು ಗೂಗಲ್​ ಪ್ಲೇಸ್ಟೋರ್​ ಹೋಗಿ ಕೂಡಲೇ ನೂತನ ವಾಟ್ಸ್ ​ಆ್ಯಪ್​ ವರ್ಶನ್​​ ಅಪ್​​ಡೇಟ್​ ಮಾಡಿಕೊಳ್ಳಬೇಕಿದೆ. ಐಫೋನ್​ ಬಳಕೆದಾರರು ಆ್ಯಪ್​ ಸ್ಟೋರ್​ ಮೂಲಕ ಅಪ್​ಡೇಟ್​​ ಮಾಡಬಹುದು ಎಂಬುದಾಗಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮೊಬೈಲ್ ನ್ನು ಮರೆತು ಬರುವವರಿಗಾಗಿ ಬಂದಿದೆ ಈ ಹೊಸ ಜಾಕೆಟ್

ಬೆಂಗಳೂರು : ಮೊಬೈಲ್ ನ್ನು ಎಲ್ಲೇಂದರಲ್ಲಿ ಮರೆತು ಬರುವವರಿಗಾಗಿ ಇದೀಗ ಹೊಸ ಜಾಕೆಟ್ ವೊಂದನ್ನು ರೆಡಿ ...

news

ಗ್ರಾಹಕರಿಗಾಗಿ 56 ರೂ.ಗಳ ಹೊಸ ಪ್ಲಾನ್ ಶುರು ಮಾಡಿದ ಬಿ.ಎಸ್‌.ಎನ್‌.ಎಲ್

ಬೆಂಗಳೂರು : ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗಾಗಿ ಇದೀಗ STV46 ಬಂದ್ ಮಾಡಿ 56 ರೂಪಾಯಿಯ ಹೊಸ ...

news

ಪೆಟ್ರೋಲ್, ಡೀಸೆಲ್‍ ಮಾತ್ರವಲ್ಲ ನೀರಿನಿಂದಲೂ ವಾಹನವನ್ನ ಓಡಿಸಬಹುದಂತೆ

ಬೆಂಗಳೂರು : ಪೆಟ್ರೋಲ್, ಡೀಸೆಲ್‍ ಬೆಲೆ ಹೆಚ್ಚಳದಿಂದ ತತ್ತರಿಸಿಹೋದ ಜನರಿಗೆ ಮೆಕ್ಯಾನಿಕಲ್‍ ಎಂಜಿನಿಯರ್ ...

news

ಪ್ಲೇಸ್ಟೋರ್ ನ ಈ 4 ಆ್ಯಪ್ ಗಳನ್ನು ಇನ್ ​ಸ್ಟಾಲ್​​​ ಮಾಡಿಕೊಂಡರೆ ಹ್ಯಾಕರ್ ​​​ಗಳಿಗೆ ನಿಮ್ಮ ಮೊಬೈಲ್ ಮಾಹಿತಿ ಲಭಿಸುತ್ತದೆಯಂತೆ!

ಬೆಂಗಳೂರು : ಸ್ಮಾರ್ಟ್ ​ಫೋನ್​ ಕಾರ್ಯಚರಣೆಯ ವೇಗ ಹೆಚ್ಚಿಸುವ ಭರವಸೆ ನೀಡುವ ಮೂಲಕ ಬಳಕೆದಾರರನ್ನು ವಂಚಿಸಲು ...