ನವದೆಹಲಿ : ಮೊಬೈಲ್ ನಲ್ಲಿ ವೈರಸ್ ಹರಡುವಂತಹ ಆರು ಆ್ಯಪ್ ಗಳು ಪತ್ತೆಯಾಗಿದ್ದು, ಗೂಗಲ್ ತನ್ನ ಪ್ಲೇಸ್ಟೋರ್ನಿಂದ ಅವುಗಳನ್ನು ತೆಗೆದುಹಾಕಿದೆ ಎಂಬುದಾಗಿ ತಿಳಿದುಬಂದಿದೆ. 500 ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿದ್ದಾರೆ. ಅಲ್ಲದೇ ಈ ಆ್ಯಪ್ ಗಳು ವೈರಸ್ ಹರಡುವುದರ ಜೊತೆಗೆ ಫೋನ್ ಬ್ಯಾಟರಿ ಚಾರ್ಜ್ ಬೇಗ ಖಾಲಿಯಾಗುದಕ್ಕೆ ಕಾರಣವಾಗುತ್ತಿದ್ದವು. ಅಲ್ಲದೇ ಬ್ಯಾಗ್ರೌಂಡ್ ನಲ್ಲಿ ತಮ್ಮ ಸರ್ವರ್ ಜತೆಗೆ ನಿರಂತರ ಸಂಪರ್ಕ ಹೊಂದಿದ್ದವು