ನವದೆಹಲಿ: ಕೊನೆಗೂ ಕೇಂದ್ರ ಸರ್ಕಾರ ಜಿಎಸ್ ಟಿ ಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಕೆಲವು ಅಗತ್ಯ ವಸ್ತುಗಳು, ಹೋಟೆಲ್ ಊಟ ಕೊಂಚ ಅಗ್ಗವಾಗಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್ ಟಿಇ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಹೋಟೆಲ್ ಊಟ, ಮಕ್ಕಳ ಆಹಾರ ಪೊಟ್ಟಣ, ಬ್ರಾಂಡ್ ರಹಿತ ಆಯುರ್ವೇದ ಔಷಧಿ, ಪ್ಲಾಸ್ಟಿಕ್ ರಬ್ಬರ್ ವೇಸ್ಟ್, ನೂಲು, ನೆಲಕ್ಕೆ ಹಾಸುವ ಕಲ್ಲು, ಸ್ಟೇಷನರಿ ಐಟಂಗಳು ಕೊಂಚ