Widgets Magazine

ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ ವಿವೋ ಖರೀದಿಸುವವರಿಗೆ ಭರ್ಜರಿ ಆಫರ್

ನವದೆಹಲಿ| pavithra| Last Modified ಶನಿವಾರ, 22 ಡಿಸೆಂಬರ್ 2018 (06:51 IST)
ನವದೆಹಲಿ : ಹಾಗೂ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಚೀನಾದ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ವಿವೋ ಹೊಸ ಆಫರ್ ಶುರು ಮಾಡಿದೆ.


ಕಂಪನಿಯ ಫೋನ್ ಗಳಾದ Vivo NEX, Vivo V11, V11 Pro, Y83 Pro ಸೇರಿದಂತೆ ಹಲವು ಫೋನ್ ಗಳನ್ನು ಗ್ರಾಹಕರು ಕೇವಲ 101 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಈ ಆಫರ್ ಕೇವಲ ಆಫ್ಲೈನ್ ನಲ್ಲಿ ಮಾತ್ರ ಲಭ್ಯವಿದೆ.


ನ್ಯೂ ಫೋನ್, ನ್ಯೂ ಇಯರ್ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಫೋನ್ ಗಳ ಭರ್ಜರಿ ಆಫರ್ ಡಿಸೆಂಬರ್ 20ರಿಂದಲೇ ಶುರುವಾಗಿದ್ದು ಜನವರಿ 31ರ ತನಕ ಇದೆ. ವಿವೋದ 10,000 ರೂಪಾಯಿಗಿಂತ ಹೆಚ್ಚು ಮೌಲ್ಯದ ಫೋನ್ ಗಳನ್ನು 101 ರೂಪಾಯಿ ನೀಡಿ ತಕ್ಷಣ ಖರೀದಿ ಮಾಡಬಹುದಾಗಿದೆ. ನಂತರ ಆರು ಇಎಂಐ ಮೂಲಕ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಕೆವೈಸಿ ಅವಶ್ಯಕತೆಯಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :