Widgets Magazine

ಸೋನಿ ಎಕ್ಸ್‌ಪೀರಿಯಾ ಎಕ್ಸ್ ಮೇಲೆ ಭಾರಿ ರಿಯಾಯಿತಿ

New Delhi| Rajendra| Last Modified ಸೋಮವಾರ, 20 ಫೆಬ್ರವರಿ 2017 (13:13 IST)
ಸೋನಿ ಕಂಪೆನಿ ಭಾರತೀಯ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್ ಕೊಟ್ಟಿದೆ. ತನ್ನ ಟಾಪ್ ಮಾಡೆಲ್ ಸ್ಮಾರ್ಟ್‌ಫೋನ್ ಎಕ್ಸ್‌ಪೀರಿಯಾ ಎಕ್ಸ್ ಬೆಲೆಯ ಮೇಲೆ ಒಮ್ಮಿಂದೊಮ್ಮೆಲೆ ರೂ.14 ಸಾವಿರ ಕಡಿತಗೊಳಿಸಿದ್ದು, ರೂ.24,990ಕ್ಕೆ ಮಾರಾಟ ಮಾಡುತ್ತಿದೆ.

ಎಕ್ಸ್‌ಪೀರಿಯಾ ಎಕ್ಸ್ ಬೆಲೆ ಮೊದಲು ರೂ.48,900ರಷ್ಟಿತ್ತು. ಆ ಬಳಿಕ ಭಾರತದ ಗ್ರಾಹಕರಿಗಾಗಿ ಇದರ ಬೆಲೆಯನ್ನು ರೂ.10 ಸಾವಿರ ಕಡಿತ ಮಾಡಿತ್ತು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದ ಕಾರಣ ಈಗ ಏಕಾಏಕಿ ರೂ.14 ಸಾವಿರ ಕಡಿತಗೊಳಿಸಿದೆ. ಭಾರತದಲ್ಲಿ ಮಾತ್ರ ಇಷ್ಟು ಕಡಿಮೆ ಬೆಲೆಗೆ ಸೋನಿ ಫೋನ್ ಲಭ್ಯವಾಗುತ್ತಿರುವುದು.

ಸೋನಿ ಎಕ್ಸ್‌ಪೀರಿಯಾ ಎಕ್ಸ್ ವಿಶೇಷಗಳು ಅದ್ಭುತವಾಗಿವೆ. ಐದು ಇಂಚಿನ ಫುಲ್ ಎಚ್‌ಡಿ ಸ್ಪರ್ಶಸಂವೇದಿ ಪರದೆ, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 650 ಪ್ರೋಸೆಸರ್, 3ಜಿಬಿ ರ‍್ಯಾಮ್, 64 ಜಿಬಿ ಇಂಟರ್‌ನಲ್ ಮೆಮೊರಿ (ಎಕ್ಸ್‌ಪಾಂಡಬಲ್ 200 ಜಿಬಿ), 23 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ, 2630 ಎಂಎಎಚ್ ಬ್ಯಾಟರಿ ಈ ಸ್ಮಾರ್ಟ್‌ಫೋನಲ್ಲಿದೆ. ಸದ್ಯಕ್ಕೆ ಗ್ರಾಫೈಟ್ ಬ್ಲ್ಯಾಕ್, ಲೈಮ್ ಗೋಲ್ಡ್, ರೋಸ್ ಗೋಲ್ಡ್, ಬಿಳಿ ಬಣ್ಣಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :