ನವದೆಹಲಿ: ದೇಶದಲ್ಲಿ ಅಗ್ಗದ ಬೆಲೆಯ ಕಾರು ಬಿಡುಗಡೆ ಮಾಡಿ ಭಾರೀ ಸುದ್ದಿ ಮಾಡಿದ್ದ ಟಾಟಾ ಸಂಸ್ಥೆ ತನ್ನ ಕನಸಿನ ಕೂಸು ನ್ಯಾನೋ ಕಾರಿಗೆ ಸದ್ಯದಲ್ಲೇ ಗುಡ್ ಬೈ ಹೇಳಲಿದೆಯಾ?ಹೌದು ಎನ್ನುತ್ತಿದೆ ಟಾಟಾ ಸಂಸ್ಥೆಯ ಮೂಲಗಳು. ಮಾರುಕಟ್ಟೆಯಲ್ಲಿ ಇತ್ತೀಚೆಗೆ ನ್ಯಾನೋ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ನ್ಯಾನೋ ಉತ್ಪನ್ನ ನಷ್ಟದಲ್ಲಿದೆ. ಹೀಗಾಗಿ ಉತ್ಪಾದನೆಯನ್ನೇ ನಿಲ್ಲಿಸಲು ಸಂಸ್ಥೆ ಚಿಂತನೆ ನಡೆಸಿದೆ.ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಕಾರಣ, ಮುಂದೆ ನ್ಯಾನೋ ಉತ್ಪನ್ನದ ಮೇಲೆ ಹೂಡಿಕೆ