Widgets Magazine

ಕೇವಲ ರೂ.777ಕ್ಕೆ ವಿಮಾನ ಟಿಕೆಟ್

New Delhi| Rajendra| Last Modified ಗುರುವಾರ, 23 ಫೆಬ್ರವರಿ 2017 (12:23 IST)
ಪ್ರಯಾಣಿಕರನ್ನು ಆಕರ್ಷಿಸಲು ವಿಮಾನಯಾನ ಸಂಸ್ಥೆಗಳು ಪೈಪೋಟಿಗೆ ಬಿದ್ದಂತಿವೆ. ರಿಯಾಯಿತಿ ಮೇಲೆ ರಿಯಾಯಿತಿ ನೀಡಲು ಮುಂದಾಗಿವೆ. ಇತ್ತೀಚೆಗೆ ಏರ್ ಏಷ್ಯಾ, ಜೆಟ್ ಏರ್‌ವೇಸ್ ಸಂಸ್ಥೆಗಳು ದೇಶೀಯ ವಿಮಾನಯಾನದಲ್ಲಿ ಕಡಿಮೆ ಬೆಲೆಗೆ ಟಿಕೆಟ್‌ಗಳನ್ನು ನೀಡುತ್ತಿವೆ.

ಈಗ ಇನ್ನೊಂದು ಪ್ರಮುಖ ವಿಮಾನಯಾನ ಸಂಸ್ಥೆ ಸ್ಪೈಸ್‍ಜೆಟ್ ’ಲಕ್ಕಿ 7 ಸೇಲ್’ ಹೆಸರಿನ ಹೊಸ ಯೋಜನೆಯನ್ನು ಪ್ರಕಟಿಸಿದೆ. ಎಲ್ಲಾ ಶುಲ್ಕಗಳು ಸೇರಿ ಟಿಕೆಟ್ ಒಂದಕ್ಕೆ ರೂ.777 ನಿಗದಿಪಡಿಸಿದೆ. ಈ ಹೊಸ ಆಫರ್ ಮೂಲಕ ಈ ತಿಂಗಳ 22ರಿಂದ ನಾಲ್ಕು ದಿನಗಳ ಕಾಲ ಟಿಕೆಟ್ ಮಾರಾಟ ಮಾಡಲಿದ್ದಾರೆ.

ಆದರೆ ಒಂದು ಕಡೆ ಪ್ರಯಾಣಕ್ಕೆ ಮಾತ್ರ ಈ ಟಿಕೆಟ್ ಬಳಸಿಕೊಳ್ಳಬಹುದು. ಈ ಕೊಡುಗೆಯನ್ನು ಮಾರ್ಚ್ 9ರಿಂದ ಏಪ್ರಿಲ್ 13ರ ಒಳಗೆ ಮಾತ್ರ ಟಿಕೆಟ್‍ ಉಪಯೋಗಿಸಬೇಕು. ಟಿಕೆಟ್‌ಗಳನ್ನು ಸ್ಪೈಸ್‌ಜೆಟ್ ಅಧಿಕೃತ ವೆಬ್‌ಸೈಟ್ ಅಥವಾ ಟ್ರಾವೆಲ್ ಏಜೆಂಟ್, ಆನ್‍ಲೈನ್ ಟ್ರಾವಲ್ ಪೋರ್ಟಲ್ಸ್‌ನಲ್ಲಿ ಪಡೆಯಬಹುದೆಂದು ಸ್ಪೈಸ್‌ಜೆಟ್ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :