ನವದೆಹಲಿ : ಟೆಲಿಕಾಂ ಕಂಪೆನಿಗಳಾದ ಐಡಿಯಾ ಹಾಗೂ ವೊಡಾಫೋನ್ ವಿಲೀನಗೊಂಡು ಇದೀಗ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ನೀಡುತ್ತಿದೆ. ಅದೇರೀತಿ ಇದೀಗ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಹಾಗೂ ಎಂ.ಟಿ.ಎನ್.ಎಲ್ ಕಂಪನಿಗಳನ್ನು ವಿಲೀನಗೊಳಿಸಲು ದೂರಸಂಪರ್ಕ ಇಲಾಖೆಯು ನಿರ್ಧರಿಸಿದೆ ಎಂಬುದಾಗಿ ತಿಳಿದುಬಂದಿದೆ.