Widgets Magazine

ಬಾಡಿಗೆ ನೀತಿಯಲ್ಲಿ ಬದಲಾವಣೆ ತರಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ| pavithra| Last Modified ಶುಕ್ರವಾರ, 12 ಜುಲೈ 2019 (09:09 IST)
ನವದೆಹಲಿ : ಮನೆ ಬಾಡಿಗೆದಾರರಿಗೊಂದು ಸಿಹಿಸುದ್ದಿ. ಕೇಂದ್ರ ಸರ್ಕಾರವು ಬಾಡಿಗೆ ನೀತಿಯಲ್ಲಿ ಬದಲಾವಣೆ ತರಲು ಮುಂದಾಗಿದೆ.
ಜುಲೈ 5ರಂದು ಮಂಡಿಸಿದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಬಾಡಿಗೆಯ ಹಳೆ ನೀತಿಯಿಂದ ಬಾಡಿಗೆದಾರ ಹಾಗೂ ಮಾಲೀಕನಿಗೆ ಕಷ್ಟವಾಗ್ತಿದೆ. ಹಾಗಾಗಿ ಹೊಸ ಮಾದರಿ ಬಾಡಿಗೆ ಕಾನೂನು ಜಾರಿಗೆ ತರುವುದಾಗಿ ತಿಳಿಸಿದ್ದರು. ಇದೀಗ ಮಾದರಿ ಬಾಡಿಗೆದಾರ ಅಧಿನಿಯಮ ಅಂತಿಮ ಹಂತದಲ್ಲಿದ್ದು, ಆಗಸ್ಟ್ ತಿಂಗಳಿನಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ.


ಬಾಡಿಗೆ ಕಾನೂನಿನ ಹೊಸ ನಿಯಮದ ಪ್ರಕಾರ, ಮನೆ ಮೂರು ತಿಂಗಳಿಗಿಂತ ಹೆಚ್ಚು ಭದ್ರತಾ ಠೇವಣಿಯನ್ನು ಇಟ್ಟುಕೊಳ್ಳುವಂತಿಲ್ಲ. ಮನೆ ಖಾಲಿ ಮಾಡುವ ವೇಳೆ ಒಂದು ತಿಂಗಳಲ್ಲಿ ಭದ್ರತೆ ಠೇವಣಿಯನ್ನು ಹಿಂತಿರುಗಿಸಬೇಕು. ಮನೆ ಮಾಲೀಕ ಮನೆ ನವೀಕರಣದ ನಂತರ ಬಾಡಿಗೆಯನ್ನು ಹೆಚ್ಚಿಸಬಹುದು. ಹೀಗೆ ಹೊಸ ಕಾನೂನಿನಲ್ಲಿ ಅನೇಕ ಹೊಸ ನಿಯಮಗಳಿರಲಿವೆ.
 
 


ಇದರಲ್ಲಿ ಇನ್ನಷ್ಟು ಓದಿ :