ನವದೆಹಲಿ : ಅಡುಗೆ ಅನಿಲ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ವಿದ್ಯುತ್ ಸಬ್ಸಿಡಿಯನ್ನೂ ಕೂಡಾ ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಇಂಧನ ಸಚಿವಾಲಯ, ಈ ಹೊಸ ವಿದ್ಯುತ್ ದರ ನೀತಿಯನ್ನು ಸಿದ್ದಪಡಿಸಿದ್ದು, ಇದಕ್ಕೆ ಲೋಕಸಭೆಯಲ್ಲಿ ಈಗಾಗಲೇ ಅನುಮೋದನೆಯೂ ಸಿಕ್ಕಿದೆ. ಅಲ್ಲದೆ ಪ್ರತಿ ಮನೆಗೂ ಸ್ಮಾರ್ಟ್ ಮೀಟರ್ ಅಳವಡಿಸಲಿದ್ದು, ಅದರ ವೆಚ್ಚವನ್ನು ಗ್ರಾಹಕರು ಕಂತುಗಳಲ್ಲಿ ತುಂಬಲು ಅವಕಾಶ