Widgets Magazine

ಅದೇ ನೋಕಿಯಾ ಫೋನ್ ಮತ್ತೆ ಬರುತ್ತಿದೆ

New Delhi| Rajendra| Last Modified ಗುರುವಾರ, 16 ಫೆಬ್ರವರಿ 2017 (13:21 IST)
ನೋಕಿಯಾ 3310...ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ಮಹರಾಜನಂತೆ ಮೆರೆದ ಮಾಡೆಲ್. ಅದ್ಭುತವಾಗಿ ಬ್ಯಾಟರಿ ಸಾಮರ್ಥ್ಯದೊಂದಿಗೆ, ಸ್ಪಷ್ಟವಾದ ವಾಯ್ಸ್ ಕ್ಲಾರಿಟಿ ಇದ್ದ ಈ ಫೋನ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಫೋನ್ ಮೂಲಕ ನೋಕಿಯಾಗೂ ಒಳ್ಳೆಯ ಬ್ರ್ಯಾಂಡ್ ನೇಮ್ ಬಂದಿತ್ತು.

ಅಷ್ಟೆಲ್ಲಾ ಮಾರಾಟವಾಗಿದ್ದ ಈ ಫೋನ್ ಈಗ ಮತ್ತೆ ಮಾರುಕಟ್ಟೆಗೆ ಬರುತ್ತಿದೆ. ನೋಕಿಯಾ ಬ್ರ್ಯಾಂಡ್ ಹೆಸರಿನಲ್ಲಿ ಎಚ್ಎಂಡಿ ಗ್ಲೋಬಲ್ ಕಂಪೆನಿ 17 ವರ್ಷಗಳ ಬಳಿಕ ಮತ್ತೆ ಮಾರುಕಟ್ಟೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಇದನ್ನು ಪ್ರದರ್ಶಿಸಲಿದೆ. ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಈ ಫೋನ್ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಏನೆಲ್ಲಾ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಬೇಕಾಗುತ್ತದೆ. ನೋಕಿಯಾ 3, ನೋಕಿಯಾ 5 ಹೆಸರಿನ ಇನ್ನೆರಡು ಆಂಡ್ರಾಯ್ಡ್ ಫೋನ್‌ಗಳನ್ನೂ ಕಂಪೆನಿ ಪ್ರಕಟಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :