ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ರೂ.15.5 ಏರಿಕೆ

ನವದೆಹಲಿ| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (08:45 IST)
ನವದೆಹಲಿ : ಸಬ್ಸಿಡಿ ರಹಿತ ಸಿಲಿಂಡರ್‌ ಗಳ ದರ ಏರಿಕೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರಗಳು ಕುಸಿದಿದ್ದು, ಭಾನುವಾರ ದರ ಪರಿಷ್ಕರಣೆಯನ್ನು ಮಾಡಲಾಗಿದೆ. ಆದ್ದರಿಂದ, ಸಬ್ಸಿಡಿರಹಿತ ಸಿಲಿಂಡರ್‌ ಗೆ ರೂ.15.5 ಏರಿಕೆ ಮಾಡಲಾಗಿದೆ.


ಈ ಹಿಂದೆ 14.5 ಕೆ.ಜಿ. ಸಿಲಿಂಡರ್‌ ಬೆಲೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 574.50 ರೂಪಾಯಿಗಳಿದ್ದು, ಈಗ 590 ರೂಪಾಯಿ ತಲುಪಿದೆ. ಮುಂಬೈನಲ್ಲಿ ಈಗ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ 562 ರೂಪಾಯಿಗಳಾಗಿದ್ದರೆ, ಕೋಲ್ಕತ್ತಾದಲ್ಲಿ 616.50 ರೂಪಾಯಿಗಳಾಗಿದೆ. ಅದೇ ರೀತಿ ಚೆನ್ನೈನಲ್ಲಿ 606.50 ರೂಪಾಯಿಗಳಾಗಿದೆ.

ಇದರಲ್ಲಿ ಇನ್ನಷ್ಟು ಓದಿ :