ಥರ್ಡ್ ಜನರೇಶನ್ ಸ್ವಿಪ್ಟ್ ಆವೃತ್ತಿಗಳು ಮಾರುಕಟ್ಟೆಗೆ...!!

ಬೆಂಗಳೂರು| ಗುರುಮೂರ್ತಿ| Last Updated: ಸೋಮವಾರ, 29 ಜನವರಿ 2018 (15:28 IST)
ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಪ್ಟ್ ಕಾರುಗಳು ಜನಪ್ರಿಯವಾಗಿದ್ದು ಕಂಪನಿ ತನ್ನ ಗ್ರಾಹಕರಿಗಾಗಿ 3ನೇ ಜನರೇಶನ್ ವೈಶಿಷ್ಟ್ಯತೆಗಳೊಂದಿಗೆ ಸ್ವಿಪ್ಟ್ ಕಾರನ್ನು ಕಂಪನಿ ಬಿಡುಗಡೆ ಮಾಡುತ್ತಿದೆ, ಇಗಾಗಲೇ ಬಾರಿ ಕೂತುಹಲವನ್ನು ಕೆರಳಿಸಿರುವ ಈ ಆವೃತ್ತಿಗಳಿಗೆ ಇಗಾಗಲೇ ಅಧಿಕೃತವಾಗಿ ಬುಕಿಂಗ್ ಆರಂಭಗೊಂಡಿದ್ದು 2018ರ ಆಟೋ ಎಕ್ಫೋದಲ್ಲಿ ಈ ಕಾರು ಪ್ರದರ್ಶನಗೊಳ್ಳಲಿದೆ.
ಭಾರತದ ಮಟ್ಟಿಗೆ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯು ಒಂದಾಗಿದ್ದು, ಇದು ತನ್ನ ಮೈಲೇಜ್ ವಿನ್ಯಾಸ ಹಾಗೂ ಗುಣಮಟ್ಟದ ತಂತ್ರಜ್ಞಾನದಿಂದ ಗ್ರಾಹಕರನ್ನು ಸೆಳೆಯುತ್ತಲೇ ಬಂದಿದೆ. ಇತ್ತೀಚಿಗೆ ಇದರ ಬೇಡಿಕೆ ಸಹ ಹೆಚ್ಚಾಗಿದ್ದು, ಗ್ರಾಹಕರಿಗೆ ಇಷ್ಟವಾಗುವಂತೆ ಹೊಸ ರೂಪಾಂತರಗಳೊಂದಿಗೆ ಮಾರುಕಟ್ಟೆಗೆ ಈ ಕಾರನ್ನು ಪರಿಚಯಿಸಲಾಗುತ್ತಿದೆ.
 
ಈಗಾಗಲೇ ಈ ಕಾರಿಗೆ ಬುಕಿಂಗ್ ಪ್ರಕ್ರಿಯೆ ಶುರುವಾಗಿದ್ದು ಮುಂಗಡವಾಗಿ 11000 ಸಾವಿರ ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಒಂದು ವೇಳೆ ನೀವು ಈ ಕಾರಿಗೆ ಮುಂಗಡವಾಗಿ ಹಣವನ್ನು ಕಟ್ಟಿದರೂ ಸಹ ಅದನ್ನು ಪಡೆಯಲು 3 ರಿಂದ 4 ತಿಂಗಳು ಕಾಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಈ ಕಾರು ಮೊದಲಿನಿಂದಲು ಗ್ರಾಹಕರನ್ನು ಆಕರ್ಷಿಸುತ್ತಲೇ ಬಂದಿದೆ. ಅದರಲ್ಲೂ ಈ ಹೊಸ ಪೀಳಿಗೆಯ ಕಾರು ತನ್ನ ಮೊದಲ ಲೂಕ್‌ನಲ್ಲೇ ಗ್ರಾಹಕರನ್ನು ಆಕರ್ಷಿಸಿದ್ದು, ಮಾರುಕಟ್ಟೆಯಲ್ಲಿರುವ ಉಳಿದ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಟಕ್ಕರ್‌ ಕೊಡುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಸ್ವಿಪ್ಟ್ ಬಿಡುಗಡೆಯಾದ ದಿನದಿಂದಲೂ ಹೆಚ್ಚು ಮಾರಾಟವಾಗುವ ಪಟ್ಟಿಯಲ್ಲಿ ಈ ಕಾರು ತನ್ನ ಹೆಸರನ್ನು ಗುರುತಿಸಿಕೊಂಡಿದ್ದು ಜಾಗತಿಕವಾಗಿ ಉತ್ಪಾದನೆ ಪ್ರಾರಂಭವಾದಾಗಿನಿಂದ ಸುಮಾರು 5.8 ಮಿಲಿಯನ್ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿದೆ.
 
ಹೊಚ್ಚ ಹೊಸದಾದ ಆವೃತ್ತಿಯಲ್ಲಿ ಕಾರಿನ ಮುಂಭಾಗದ ವಿನ್ಯಾಸ ಮತ್ತು ಹಿಂಬದಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಕಾರಿಗೆ ಪೂರ್ಣ ಪ್ರಮಾಣದ ಸ್ಫೋರ್ಟ್ಸ್ ಲೂಕ್ ನೀಡುವಲ್ಲಿ ಕಂಪನಿ ಗೆದ್ದಿದೆ ಎಂದೇ ಹೇಳಬಹುದು. ಹೆಡ್‌ಲ್ಯಾಂಪ್‌ಗಳಲ್ಲಿ ಎಲ್‌ಇಡಿ ಲೈಟ್ ಅನ್ನು ಅಳವಡಿಸಲಾಗಿದ್ದು, ಹಗಲಿನಲ್ಲಿ ಚಾಲನೆ ಮಾಡುವಾಗ ಆನ್ ಮಾಡಬಹುದಾಗ ಎಲ್‌ಇಡಿ ಟೈಲ್ ಲೈಟ್‌ ಅನ್ನು ಇದು ಹೊಂದಿದೆ. ಅಲ್ಲದೇ ಇದರ ಒಳ ವಿನ್ಯಾಸವು ಅತ್ಯಾಕರ್ಷಕವಾಗಿದ್ದು, ಫ್ಲಾಟ್-ಬಾಟಮ್ ಸ್ಟೇರಿಂಗ್‌ನೊಂದಿಗೆ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹ ಇದರಲ್ಲಿದೆ. ಆರಾಮದಾಯಕ ಪ್ರಯಾಣಕ್ಕೆ ಈ ಕಾರು ಸೂಕ್ತವಾಗಿವಾಗಿದ್ದು, ಇದರಲ್ಲಿರುವ ಫಾಗ್ ಲೈಟ್‌ ಈ ಕಾರಿನ ಮೆರಗು ಹೆಚ್ಚಿಸುತ್ತಿದೆ ಎಂದೇ ಹೇಳಬಹುದು.
ಈ ಕಾರು 1.2 ಲೀಟರ್ ಕೆ-ಸೀರೀಸ್ ಪೆಟ್ರೋಲ್ ಮತ್ತು 1.3-ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು ಮ್ಯಾನುವಲ್ ಮತ್ತು ಆಟೋಗೇರ್ ಎರಡನ್ನು ಇದು ಒಳಗೊಂಡಿದೆ. LXi, VXi, ZXi ಮತ್ತು ZXi+ ಮಾದರಿಗಳು ಇದರಲ್ಲಿ ಲಭ್ಯವಿದ್ದು, ಪೆಟ್ರೋಲ್ ಮತ್ತು ಡೀಸಲ್ ಈ ಎರಡು ಆವೃತ್ತಿಗಳನ್ನು ನಾವು ಕಾಣಬಹುದಾಗಿದೆ. ಅಲ್ಲದೇ ಹೊಸ ಆವೃತ್ತಿಯ ಕಾರುಗಳು 6 ಬಣ್ಣಗಳಲ್ಲಿ ಲಭ್ಯವಿದ್ದು, ಲ್ಯೂಸೆಂಟ್ ಆರೆಂಜ್ ಬಣ್ಣದ ಈ ಕಾರು ತುಂಬಾ ಆಕರ್ಷಕವಾಗಿದೆ.
 
ಈ ಕಾರಿನ ಆರಂಭಿಕ ಬೆಲೆ 4.99 ಲಕ್ಷದಿಂದ 7.99 ಇರಲಿದ್ದು ಬಲೆನೊ ಆರ್‌ಎಸ್ ಮತ್ತು ಡಿಜೈರ್‌ ಕಾರಿಗೆ ಹೋಲಿಸಿದರೆ ಬೆಲೆ ಕಡಿಮೆ ಎಂದೇ ಹೇಳಬಹುದು. ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರ ರೂಪಿಸಿರುವ ಮಾರುತಿ ಸುಜುಕಿ ತನ್ನ ಇತರ ಪ್ರತಿಸ್ಪರ್ಧಿ ಕಾರುಗಳಿಗೆ ಸವಾಲು ಒಡ್ಡುವುದರಲ್ಲಿ ಯಾವುದೇ ಸಂಶಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :