ನವದೆಹಲಿ: ಎಲ್ಲಾರೂ ಮಾಡುವುದು ದುಡ್ಡಿಗಾಗಿ ಎನ್ನುವ ಈ ಕಾಲದಲ್ಲಿ ಆಘಾತ ನೀಡುವ ಸುದ್ದಿಯೊಂದು ಬಂದಿದೆ.ನಾವು ಬಳಸುವ ನೋಟಿನಿಂದ ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆಯಿದೆಯಂತೆ. ಹಾಗಂತ ಇದರ ಬಗ್ಗೆ ಮುನ್ನಚ್ಚರಿಕೆ ಕೈಗೊಳ್ಳುವಂತೆ ವಿತ್ತ ಸಚಿವ ಅರುಣ್ ಜೇಟ್ಲಿಗೆ ವ್ಯಾಪಾರಿಗಳ ಮಂಡಳಿ ಸಿಎಐಟಿ ಪತ್ರ ಬರೆದಿದೆ.ಕೆಲವು ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ವ್ಯಾಪಾರಿಗಳ ಮಂಡಳಿ ವಿತ್ತ ಸಚಿವರಿಗೆ ಇಂತಹದ್ದೊಂದು ಮನವಿ ಮಾಡಿದೆ. ಶ್ವಾಸಕೋಶ, ಮೂತ್ರ, ಚರ್ಮ ಸೋಂಕು ಮುಂತಾದ ಗಂಭೀರ ಖಾಯಿಲೆ ಬರುವ ಸಾಧ್ಯತೆಯಿದೆಯಂತೆ!