ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಭೀಮ್ ಆಪ್ ಮೂಲಕ ಇದುವರೆಗೆ ಸುಮಾರು ರೂ.361 ಕೋಟಿ ವಹಿವಾಟು ನಡೆದಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಬುಧವಾರ ಲೋಕಸಭೆಯಲ್ಲಿ ನಡೆದ ಪ್ರಶ್ನೋತ್ತರ ಸಮಯದಲ್ಲಿ ಕೇಂದ್ರ ಸಚಿವ ಇಂದ್ರಜಿತ್ ಸಿಂಗ್ ಈ ವಿಷಯವನ್ನು ತಿಳಿಸಿದರು. ಡಿಜಿಟಲ್ ವಹಿವಾಟಿಗೆ ಜನ ಬೇರೆಬೇರೆ ಬ್ಯಾಂಕಿಂಗ್ ಅಪ್ಲಿಕೇಷನ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವೆಲ್ಲವನ್ನೂ ಒಂದೇ ವೇದಿಕೆಗೆ ತರಲು ಭೀಮ್ ಆಪ್ನ್ನು ಸರಕಾರ ಹೊರತಂದಿದೆ. ಇತರೆ ದೇಶಗಳು ಶೇ.90ರಷ್ಟು