Widgets Magazine

ಜಿಯೋದಿಂದ ಟ್ರಿಬಲ್ ಕ್ಯಾಶ್‌ಬ್ಯಾಕ್ ಆಫರ್

ಮುಂಬೈ| ಗುರುಮೂರ್ತಿ| Last Modified ಬುಧವಾರ, 20 ಡಿಸೆಂಬರ್ 2017 (15:22 IST)
ದೇಶದ ಅತೀ ದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜೀಯೊ ಪ್ರಾರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದ್ದು ಈಗ ಆಫರ್ ಅನ್ನು ವಿಸ್ತರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ.
ಜಿಯೋ ತನ್ನ ಗ್ರಾಹಕರಿಗಾಗಿ ಟ್ರಿಬಲ್ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು ಇದನ್ನು ಡಿಸೆಂಬರ್ 25 ರವರೆಗೆ ವಿಸ್ತರಿಸಿದೆ. ನೀವು ಜಿಯೋ ವ್ಯಾಲೆಟ್, ಅಮೆಜಾನ್ ಪೇ, ಪೇಟಿಎಂ, ಫೋನ್‌ಫೆ ಮತ್ತು ಮೊಬಿಕ್ವಿಕ್ ಬಳಸಿ ಕೂಡಾ ರೀಚಾರ್ಜ್‌ ಮಾಡಬಹುದಾಗಿದೆ.
 
ಈ ಆಫರ್ ಅನ್ನು ಕಂಪನಿ ಕಳೆದ ತಿಂಗಳು ತನ್ನ ಗ್ರಾಹಕರಿಗೆ ನೀಡಿದ್ದು ಡಿಸೆಂಬರ್‌ 25 ರವರೆಗೆ ಅದರ ಅವಧಿಯನ್ನು ವಿಸ್ತರಿಸಿದೆ. ಈ ಟ್ರಿಬಲ್ ಕ್ಯಾಶ್‌ಬ್ಯಾಕ್ ಆಫರ್ ರೂ. 399 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳಿಗೆ ಅನ್ವಯಿಸುತ್ತಿದ್ದು ರೀಚಾರ್ಜ್‌ ಮಾಡುವ ಮೂಲಕ ಗ್ರಾಹಕರು ರೂ. 400 ವರೆಗಿನ ಕ್ಯಾಶ್‌ಬ್ಯಾಕ್ ವೋಚರ್‌ ಅನ್ನು ಪಡೆಯಬಹುದು. ಇದಲ್ಲದೇ ಜಿಯೋ ತನ್ನ ಇತರ ಪಾಲುದಾರ ಕಂಪನಿಯ ಖರೀದಿಗಳ ಮೇಲೆ ಪ್ರತಿ ರಿಚಾರ್ಜ್‌ಗೆ ರೂ. 1899 ರವರೆಗಿನ ಭಾರೀ ವೋಚರ್ ನೀಡುತ್ತಿದ್ದು ಅದರ ವಿವರ ಇಲ್ಲಿದೆ.
 
ಯಾತ್ರಾ: ದೇಶಿಯ ವಿಮಾನ ಪ್ರಯಾಣದ ಟಿಕೇಟ್‌ಗಳ ಮೇಲೆ 500 ರಿಂದ 1000 ರೂಪಾಯಿವರೆಗೆ ರಿಯಾಯಿತಿ ಇದ್ದು ಅಜಿಜೋನಲ್ಲಿ ರೂ. 1500 ಖರೀದಿಗಳ ಮೇಲೆ ರೂ. 300 ರಷ್ಟು ಮತ್ತು ಟ್ರೆಂಡ್ಸ್‌ನಲ್ಲಿ ರೂ.1,999 ಖರೀದಿಗಳ ಮೇಲೆ ರೂ.500 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.
 
ಈ ಆಫರ್ ಸೀಮಿತ ಅವಧಿಯಾಗಿದ್ದು ಡಿಸೆಂಬರ್ 25 ರ ಒಳಗೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :