Widgets Magazine

ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಬಜೆಟ್

New Delhi| Rajendra| Last Modified ಬುಧವಾರ, 1 ಫೆಬ್ರವರಿ 2017 (10:54 IST)
ಇದೇ ಮೊದಲ ಬಾರಿಗೆ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಆಗುತ್ತಿದೆ. ನಿಮಗೆ ನೆನಪಿರಬಹುದು ಈ ಹಿಂದೆ ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಸಮಯವನ್ನು ಬೆಳಗ್ಗೆಗೆ ಬದಲಾಯಿಸಿತು ಮತ್ತು ಸಂಸತ್ತಿನ ಅಧಿವೇಶನ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಬಜೆಟ್ ಮಂಡಿಸಲಾಗಿತ್ತು.

ಇಂದಿನಿಂದ ಮತ್ತೊಂದು ಆರಂಭವಾಗುತ್ತಿದೆ. ಒಂದು ತಿಂಗಳ ಮೊದಲು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ ಮತ್ತು ರೈಲ್ವೆ ಬಜೆಟ್ ಈಗ ಕೇಂದ್ರ ಬಜೆಟ್ ಭಾಗವಾಗಿದೆ.

ಈ ಬಗ್ಗೆ ಸಂಸತ್ತಿನಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ ಮತ್ತು ಈ ನಿರ್ಧಾರದ ಲಾಭ ಮುಂದಿನ ದಿನಗಳಲ್ಲಿ ಪ್ರತಿಫಲಿತವಾಗಲಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಎಲ್ಲ ರಾಜಕೀಯ ಪಕ್ಷಗಳೂ ಸಂಸತ್ತಿನಲ್ಲಿ ಆರೋಗ್ಯ ಪೂರ್ಣ ಚರ್ಚೆಯ ಖಾತ್ರಿಗಾಗಿ ಕೈಜೋಡಿಸುತ್ತವೆ ಎಂಬ ಆಶಾ ಭಾವನೆಯಲ್ಲಿ ಸರಕಾರ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :