Widgets Magazine

ವಾಜಪೇಯಿ ಸ್ಮರಣಾರ್ಥವಾಗಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 100 ರೂಪಾಯಿ ನಾಣ್ಯ

ನವದೆಹಲಿ| pavithra| Last Modified ಶನಿವಾರ, 15 ಡಿಸೆಂಬರ್ 2018 (07:36 IST)
ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಶೀಘ್ರದಲ್ಲೇ 100 ರೂಪಾಯಿ ಬಿಡುಗಡೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧಾರ ಮಾಡಿದೆ.


100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಮುಖದ ಚಿತ್ರ ಹಾಗೂ ಅವರ ಜನ್ಮ ಮತ್ತು ಮರಣ ದಿನಾಂಕ (1924-2018) ಇರಲಿದೆ. ಜೊತೆಗೆ ದೇವನಾಗರಿ ಹಾಗೂ ಇಂಗ್ಲೀಷ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇರಲಿದೆ.


ನಾಣ್ಯದ ಇನ್ನೊಂದು ಮುಖದ ಮಧ್ಯ ಭಾಗದಲ್ಲಿ ಅಶೋಕ ಚಕ್ರ ಇರಲಿದ್ದು, ಇದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೇ ಮುದ್ರಿಸಲಾಗುವುದು. ಅಲ್ಲದೆ ದೇವ ನಾಗರಿ ಲಿಪಿಯಲ್ಲಿ ಭಾರತ್ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ ಎಂದು ಇರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :