Widgets Magazine

ವಿಜಯ್ ಮಲ್ಯ ವಿಲ್ಲಾ 73 ಕೋಟಿ ರೂಪಾಯಿಗೆ ಸೇಲ್?

ಗೋವಾ| venu| Last Modified ಭಾನುವಾರ, 9 ಏಪ್ರಿಲ್ 2017 (11:59 IST)
ಸಾವಿರಾರು ಕೋಟಿ ಸಾಲ ಮಾಡಿ ಸುಸ್ತಿದಾರನಾಗಿ ಲಂಡನ್ನಿಗೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಒಡೆತನದ ಗೋವಾದ ಕಿಂಗ್ ಫಿಶರ್ ವಿಲ್ಲಾ ಸೇಲ್ ಆಗಿದೆ. ದಕ್ಷಿಣ ಭಾರತದ ಖ್ಯಾತ ನಟ ಸಚಿನ್ ಜೋಶಿಗೆ ಎಸ್`ಬಿಐ ನೇತೃತ್ವದ ಗ್ರೂಪ್ ಆಫ್ ಬ್ಯಾಂಕ್ ಸೇಲ್ ಮಾಡಿದೆ.
 

ಟೂರಿಸ್ಟ್ ಹಾಟ್ ಸ್ಪಾಟ್ ಪಿಕ್ಟರ್ ಸ್ಕ್ಯೂ ಕ್ಯಾಂಡೋಲಿಮ್ ಬೀಚ್ ಸಮೀಪವಿರುವ ಕಿಶ್ ಫಿಶರ್ ವಿಲ್ಲಾವನ್ನ 73 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ನಡೆದ ಮೂರೂ ಹರಾಜಿನಲ್ಲೂ ಕೊಳ್ಳುವರಿಲ್ಲದೆ ವಿಲ್ಲಾ ಹಾಗೇ ಉಳಿದಿತ್ತು. ಈ ಮೊದಲು ಈ ವಿಲ್ಲಾಗೆ 81-85 ಕೋಟಿ ರೂ. ಬೆಲೆ ನಿಗದಿಪಡಿಸಲಾಗಿತ್ತು. ಈಗ 73 ಕೋಟಿಗೆ ಸೇಲ್ ಆಗಿದೆ ಎಂದು ಹೆಸರೇಳಲಿಚ್ಛಿಸದ ಎಸ್ಬಿಐ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :