Widgets Magazine

ಪ್ರೇಮಿಗಳಿಗೆ ವಿಸ್ತಾರಾ ಲವ್ಲಿ ಆಫರ್

New Delhi| Rajendra| Last Modified ಮಂಗಳವಾರ, 14 ಫೆಬ್ರವರಿ 2017 (11:43 IST)
ವಿಮಾನಯಾನ ಸಂಸ್ಥೆ ವಿಸ್ತಾರಾ ಏರ್‌ಲೈನ್ಸ್ ವಿಶೇಷ ಐದು ದಿನಗಳ ಮಾರಾಟದ ಮೂಲಕ ಪ್ರೇಮಿಗಳಿಗೆ ಬಂಪರ್ ಆಫರ್ ಪ್ರಕಟಿಸಿದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ಐದು ದಿನಗಳ ಕಾಲ ವಿಶೇಷ ವ್ಯಾಲೆಂಟೇನ್ಸ್ ಡೇ ಮಾರಾಟ ಆರಂಭಿಸಿದೆ. ಸೋಮವಾರದಿಂದ ಈ ಹೊಸ ಆಫರ್ ಲಭ್ಯ.

ರೂ.899ರಿಂದ ಆರಂಭವಾಗುವ ವಿಮಾನ ಟಿಕೆಟ್‍ಗಳನ್ನು ನೀಡಲಾತ್ತಿದೆ. ಎಕಾನಮಿ ಕ್ಲಾಸ್‌ನಲ್ಲಿ ಒಂದು ಮಾರ್ಗದ ಪ್ರಯಾಣಕ್ಕೆ ಎಲ್ಲ ಬೆಲೆಗಳನ್ನು ಸೇರಿಸಿ ಟಿಕೆಟ್ ಬೆಲೆ ನಿರ್ಧರಿಸಿದೆ. ಟೆಕೆಟ್ ಮಾರಾಟ ಫೆ.13ರಿಂದ ಆರಂಭವಾಗಿದ್ದು ಫೆ.17ರ ಮಧ್ಯರಾತ್ರಿವರೆಗೂ ಲಭ್ಯವಾಗಲಿದೆ.

ಈ ಆಫರ್‌ನಲ್ಲಿ ಬುಕ್ ಮಾಡಿಕೊಂಡ ಟಿಕೆಟ್ ಮೂಲಕ ಫೆ.28, 2017 ರಿಂದ ಸೆಪ್ಟೆಂಬರ್ 20, 2017ರ ಮಧ್ಯರಾತ್ರಿವರೆಗೆ ಪ್ರಯಾಣಿಸಬೇಕಾಗುತ್ತದೆ. ಅದೇ ರೀತಿ ಬಿಜಿನೆಸ್ ಕ್ಲಾಸ್‌‍ನಲ್ಲಿ ಶೇ.60ರಷ್ಟು ವಿಶೇಷ ರಿಯಾಯಿತಿ, ಪ್ರೀಮಿಯಂ ಎಕಾನಮಿಯಲ್ಲಿ ಶೇ.40ರಷ್ಟು ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಭಾರತದಲ್ಲಿ 20 ಪ್ರದೇಶಗಳಿಗೆ ಪ್ರಯಾಣಿಸಲು ಈ ಟಿಕೆಟ್‌ಗಳನ್ನು ಬಳಸಿಕೊಳ್ಳಬಹುದೆಂದು ವಿಸ್ತಾರಾ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :