Widgets Magazine

ಹಬ್ಬಕ್ಕೆ ಏರ್ ಟೆಲ್, ಜಿಯೋ, ವೊಡಾಫೋನ್ ಬಂಪರ್ ಆಫರ್!

ನವದೆಹಲಿ| Krishnaveni| Last Modified ಗುರುವಾರ, 28 ಸೆಪ್ಟಂಬರ್ 2017 (06:47 IST)
ನವದೆಹಲಿ: ಈ ವಾರಂತ್ಯದಲ್ಲಿ ನವರಾತ್ರಿ ಸಂಭ್ರಮ. ಈಗಾಗಲೇ ಮಾರುಕಟ್ಟೆ ಚುರುಕಾಗಿದೆ. ಗ್ರಾಹಕರಿಗೆ ವಿವಿಧ ಕಂಪನಿಗಳು ಬಂಪರ್ ಆಫರ್ ನೀಡುತ್ತಿದ್ದಾರೆ. ಇದಕ್ಕೆ ಟೆಲಿಕಾಂ ಸಂಸ್ಥೆಗಳೂ ಹೊರತಾಗಿಲ್ಲ.

 
ವೊಡಾಫೋನ್, ಐಡಿಯಾ,  ಏರ್ ಟೆಲ್,  ರಿಲಯನ್ಸ್ ಸೇರಿದಂತೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಬಂಪರ್ ಆಫರ್ ನೀಡುತ್ತಿವೆ. ಯಾರೆಲ್ಲಾ ಯಾವ ಆಫರ್ ನೀಡುತ್ತಿದ್ದಾರೆಂದು ನೋಡೋಣ.
 
ಏರ್ ಟೆಲ್
ಏರ್ ಟೆಲ್ ಹಬ್ಬದ ಪ್ರಯುಕ್ತ 999 ರೂ. ಗಳ 112 ಜಿಬಿ 3 ಜಿ ಅಥವಾ 4 ಜಿ ಡೇಟಾ ಪ್ಯಾಕ್ ನೀಡುತ್ತಿದೆ. ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯ.
 
ವೊಡಾಫೋನ್
ವೊಡಾಫೋನ್ ನಿಮ್ಮ ಬಳಿಯಿದ್ದರೆ ತಕ್ಷಣವೇ 4 ಜಿ ಸೂಪರ್ ನೆಟ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ. 9 ದಿನಗಳ ಹಬ್ಬದ ಪ್ರಯುಕ್ತ ವೊಡಾಫೋನ್ ಉಚಿತ ಸಿನಿಮಾ  ಮತ್ತು ರೆಸ್ಟೋರೆಂಟ್ ಟಿಕೆಟ್ ಒದಗಿಸುತ್ತಿದೆ. ಆದರೆ ಇದು ಗುಜರಾತ್ ಗ್ರಾಹಕರಿಗೆ ವಿಶೇಷ ಲಾಭ.
 
ಬಿಎಸ್ಎನ್ಎಲ್
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡಾ ಆಫರ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. 444 ರೂ.ಗಳಿಗೆ ಮೂರು ತಿಂಗಳ ಅವಧಿಗೆ 360 ಜಿಬಿ ಡಾಟಾ ಒದಗಿಸಲಿದೆ.
 
ರಿಲಯನ್ಸ್ ಜಿಯೊ
ರಿಲಯನ್ಸ್ ಜಿಯೊ ಗ್ರಾಹಕರಿಗಾಗಿ ಸೆಪ್ಟೆಂಬರ್ 20 ರಿಂದ 30 ರವರೆಗಿನ ಅವಧಿಗೆ ಹಾಟ್ ಸ್ಪಾಟ್ ಗ್ರಾಹಕರಿಗೆ ಈಗಿರುವ ದರಕ್ಕಿಂತ ಅರ್ಧದಷ್ಟು ಕಡಿಮೆ ದರದಲ್ಲಿ ಸೇವೆ ಒದಗಿಸಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :