ನವದೆಹಲಿ: ರಿಲಯನ್ಸ್ ಸಂಸ್ಥೆಯ ಜಿಯೊ ಸಿಮ್ ಆರಂಭಿಸಿದಾಗಿನಿಂದ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಪೈಪೋಟಿಗೆ ಬಿದ್ದವರಂತೆ ದರ ಸಮರ ಆರಂಭಿಸಿತ್ತು. ಇದೀಗ ವೊಡಾಫೋನ್ ಸಂಸ್ಥೆ ಜಿಯೊ ಸಮ್ಮರ್ ಸಪ್ರೈಸ್ ಆಫರ್ ವಿರುದ್ದ ದೂರು ನೀಡಿದೆ. ಟ್ರಾಯ್ ಗೆ ದೂರು ನೀಡಿರುವ ವೊಡಾಫೋನ್, ಜಿಯೊ ಟ್ರಾಯ್ ಸೂಚನೆಯ ಹೊರತಾಗಿಯೂ ಸಮ್ಮರ್ ಸಪ್ರೈಸ್ ಪ್ಯಾಕೇಜ್ ನೀಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ ಎಂದಿದೆ. ಇತ್ತೀಚೆಗಷ್ಟೇ ಭಾರತೀಯ ಟೆಲಿಕಾಂ ಪ್ರಾಧಿಕಾರ ಟ್ರಾಯ್ ಸಮ್ಮರ್ ಸಪ್ರೈಸ್ ಯೋಜನೆ