Widgets Magazine

ವೊಡಾಫೋನ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ಒಂದು ಬಂಪರ್ ಆಫರ್!

ನವದೆಹಲಿ| Krishnaveni| Last Modified ಗುರುವಾರ, 23 ನವೆಂಬರ್ 2017 (11:29 IST)
ನವದೆಹಲಿ: ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಲು ಫೆಬ್ರವರಿಯ ಗಡುವು ನೀಡಿದೆ. ಹೀಗಿರುವಾಗ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಲು ಕಷ್ಟಪಡುತ್ತಿದ್ದಾರಾ? ಇಂತಹವರಿಗೆ ವೊಡಾಫೋನ್ ಒಂದು ಬಂಪರ್ ಆಫರ್ ನೀಡುತ್ತಿದೆ.

ಒಂದು ವೇಳೆ ನೀವು ವೊಡಾಫೋನ್ ಸಿಮ್ ಬಳಸುತ್ತಿದ್ದರೆ, ಇನ್ನು ಆಧಾರ್ ಲಿಂಕ್ ಮಾಡುವುದು ಸುಲಭ. ಮೊಬೈಲ್ ಅಂಗಡಿಗೆ ಹೋಗುವ ತಲೆನೋವೇ ಇರಲ್ಲ. ಮನೆಗೇ ಬಂದು ಆಧಾರ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ.ಈಗಾಗಲೇ ರಾಜಸ್ಥಾನದಲ್ಲಿ ಈ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕಾಗಿ ಎರಡು ಮೊಬೈಲ್ ವ್ಯಾನ್ ಗಳು ಮನೆ ಮನೆಗೆ ಸಂಚರಿಸುತ್ತಿದ್ದು, ಈ ರೀತಿ ಹಳ್ಳಿ ಹಳ್ಳಿಗೆ ಹೋಗಿ ಆಧಾರ್ ಲಿಂಕ್ ಮಾಡಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತಾರವಾಗಲೂಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :