Widgets Magazine

ವೋಡಾಫೋನ್ ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ ಈ ಹೋಸ ಪ್ರೀಪೇಯ್ಡ್ ಪ್ಲಾನ್

ನವದೆಹಲಿ| pavithra| Last Modified ಭಾನುವಾರ, 24 ಫೆಬ್ರವರಿ 2019 (12:35 IST)
ನವದೆಹಲಿ : ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೋಡಾಫೋನ್ ತನ್ನ ಗ್ರಾಹಕರಿಗಾಗಿ 1,999 ರೂಪಾಯಿ ಹೊಸ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ.


ವೋಡಾಫೋನ್ ಈ ಹಿಂದೆ 1699 ರೂಪಾಯಿ ಪ್ಲಾನ್ ಬಿಡುಗಡೆ ಮಾಡಿತ್ತು, 365 ದಿನಗಳ ವ್ಯಾಲಿಡಿಟಿ ಹೊಂದಿದ್ದ ಈ ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರಿಗೆ ಬರೀ 1 ಜಿಬಿ ಡೇಟಾ ಮಾತ್ರ ಲಭ್ಯವಾಗುತ್ತಿದ್ದ ಕಾರಣ ಗ್ರಾಹಕರು ಈ ಪ್ಲಾನ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.


ಆದ ಕಾರಣ ಇದೀಗ
ವೋಡಾಫೋನ್ ತನ್ನ ಗ್ರಾಹಕರಿಗಾಗಿ
1,999 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದ್ದು, ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ. ಹಾಗೇ ಅನಿಯಮಿತ ನ್ಯಾಷನಲ್, ರೋಮಿಂಗ್ ಕರೆ ಜಿಒತೆಗೆ
ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. ಾದರೆ
ಕೇರಳದಲ್ಲಿ ಮಾತ್ರ ಪ್ಲಾನ್ ಶುರುವಾಗಿದ್ದು, ಯಾವಾಗ ಬೇರೆ ರಾಜ್ಯಗಳಿಗೆ ಪ್ಲಾನ್ ವಿಸ್ತರಣೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :