ಇತ್ತೀಚಿಗಷ್ಟೇ ತ್ವರಿತ ಸಂದೇಶ ಸೇವೆ ವಾಟ್ಸಪ್, ಬಳಕೆದಾರರ ಡೇಟಾ ಮಾಹಿತಿಯನ್ನು ಮಾತೃ ಸಂಸ್ಥೆ ಫೇಸ್ಬುಕ್ನೊಂದಿಗೆ ಹಂಚಿಕೊಳ್ಳುವ ನಿರ್ಧಾರ ಮಾಡಿರುವ ಕುರಿತು ನ್ಯಾಯಾಲಯದಲ್ಲಿ ಸಲ್ಲಿಸಲಾದ ದೂರಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ.