ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ ನೀಡಿದೆ ಈ ಹೊಸ ಆಯ್ಕೆ

ನವದೆಹಲಿ| pavithra| Last Modified ಶನಿವಾರ, 21 ಸೆಪ್ಟಂಬರ್ 2019 (05:52 IST)
ನವದೆಹಲಿ : ವಾಟ್ಸ್ ​ಆಯಪ್​ ಸ್ಟೇಟಸ್​ ನಲ್ಲಿ ಫೇಸ್​ ಬುಕ್​ ಶೇರ್​ ಆಯ್ಕೆಯೊಂದನ್ನು ಪರಿಚಯಿಸುವುದರ ಮೂಲಕ ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ ಖುಷಿ ಸುದ್ದಿ ನೀಡಿದೆ.ಇನ್ಸ್ಟ್ರಾಗ್ರಾಮ್ ಸ್ಟೋರಿಗಳನ್ನು ಫೇಸ್ಬುಕ್ ಸ್ಟೋರಿ ಜೊತೆ ಹಂಚಿಕೊಳ್ಳುವ ಆಯ್ಕೆ ಈ ಹಿಂದೆಯೇ ಇತ್ತು. ಆದರೆ ವಾಟ್ಸಾಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಸ್ಟೋರಿಯನ್ನು ಬೇರೆ ಬೇರೆಯಾಗಿ ಹಂಚಿಕೊಳ್ಳಬೇಕಿತ್ತು. ಆದರೆ ಈಗ ವಾಟ್ಸ್​ ಆಯಪ್​ ಸ್ಟೇಟಸ್​ನಲ್ಲಿ ಹಾಕುವ ಸ್ಟೋರಿಯನ್ನು ನೇರವಾಗಿ ಫೇಸ್ ​ಬುಕ್ ​ನಲ್ಲೂ ಶೇರ್​​ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದೆ.
ವಾಟ್ಸ್​ಆಯಪ್​ ಸ್ಟೇಟಸ್​ ಅನ್ನು ಫೇಸ್​ಬುಕ್​ ಶೇರ್​ ಮಾಡುವ ವಿಧಾನ ಹೀಗಿದೆ:


ಮೊದಲಿಗೆ ವಾಟ್ಸ್​ಆಯಪ್​ ಸ್ಟೇಟಸ್​ ಆಯ್ಕೆಯನ್ನು ಕ್ಕಿಕ್​ ಮಾಡಿ. ಬಳಿಕ ಸ್ಟೇಟಸ್​ ಪಕ್ಕದಲ್ಲಿ ಕಾಣುವ ಮೂರು ಚುಕ್ಕಿಗಳ ಆಷ್ಷನ್​ ಅನ್ನು ಆಯ್ಕೆ ಮಾಡಿ, ಅದರಲ್ಲಿ ಶೇರ್​ ಟು ಫೇಸ್​ ಬುಕ್​ ಆಯ್ಕೆಯನ್ನು ಕ್ಲಿಕ್​ ಮಾಡಿ. ಆಗ ನಿಮ್ಮ ಫೇಸ್​ ಬುಕ್​ ಖಾತೆ ಸಿಗುತ್ತದೆ. ಅಲ್ಲಿ ಶೇರ್​ ನೌ ಆಯ್ಕೆಯನ್ನು ಕ್ಕಿಕ್​ ಮಾಡಿ. ನಂತರ ವಾಟ್ಸ್​ಆಯಪ್​ ಸ್ಟೇಟಸ್​​ ಫೇಸ್ ​ಬುಕ್ ​​ಗೆ ಶೇರ್ ಆಗುತ್ತದೆ.​

 


ಇದರಲ್ಲಿ ಇನ್ನಷ್ಟು ಓದಿ :