ಬೆಂಗಳೂರಿನಲ್ಲಿ ನಡೆದಿದ್ದ ರೆಡ್ಮಿ ನೋಟ್-4 ಮೊಬೈಲ್ ಸ್ಫೋಟ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ಸಂಸ್ಥೆ ಸ್ಪಷ್ಟಪಡಿಸಿದೆ. ಮೊಬೈಲ್ ಮಾಲೀಕ ಅನ್ಯ ಚಾರ್ಜರ್ ಬಳಸಿದ್ದರಿಂದ ಫೋನ್ ಸ್ಫೋಟಗೊಂಡು ಬೆಂಕಿಜ್ವಾಲೆ ಹೊತ್ತಿಕೊಂಡಿದೆ. ತನಿಖೆ ವೇಳೆ ಈ ಸತ್ಯ ಧೃಡಪಟ್ಟಿದ್ದು, ಅದರ ಬದಲಾಗಿ ಹೊಸ ರೆಡ್ಮಿ ನೋಟ್-4 ಉಚಿತವಾಗಿ ನೀಡಿರುವುದಾಗಿ ಷಿಯಾಮಿ ಇಂಡಿಯಾ ತಿಳಿಸಿದೆ.