Widgets Magazine

ಹೊಸ ಎರಡು ಬಣ್ಣಗಳಲ್ಲಿ ರೆಡ್‌ಮಿ ನೋಟ್ 4

New Delhi| Rajendra| Last Modified ಶನಿವಾರ, 24 ಡಿಸೆಂಬರ್ 2016 (11:53 IST)
ಚೀನಾ ಮೂಲದ ಪ್ರಮುಖ ಮೊಬೈಲ್ ತಯಾರಿಕಾ ಕಂಪನಿ ಶಿಯೋಮಿ ತನ್ನ ಹೊಸ ಉತ್ಪನ್ನ ರೆಡ್‌ಮಿ ನೋಟ್ 4ನ್ನು ಎರಡು ಹೊಸ ಬಣ್ಣಗಳಲ್ಲಿ ತರಲಿದೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಈ ಫೋನ್ ಈಗಾಗಲೆ ಗೋಲ್ಡ್, ಸಿಲ್ವರ್, ಗ್ರೇ ಬಣ್ಣಗಳಲ್ಲಿ ಲಭ್ಯವಾಗುತ್ತಿದೆ.
 
ಇದೀಗ ಹೊಸದಾಗಿ ನೀಲಿ, ಕಪ್ಪು ಬಣ್ಣಗಳಲ್ಲಿ ಮೋಡೆಲ್‍ಗಳನ್ನು ತರಲಿದೆ. ಚೀನಾದಲ್ಲಿ ಸಿಗುತ್ತಿರುವ ಈ ಫೋನ್ ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. 3ಜಿಬಿ ರ್ಯಾಮ್ ಹೊಂದಿರುವ ಈ ಫೋನ್‍ 32ಜಿಬಿ, 64ಜಿಬಿ ಎರಡು ಭಿನ್ನ ಆವೃತ್ತಿಗಳಲ್ಲಿ ಲಭ್ಯವಾಗಲಿದೆ.
 
ರೆಡ್‍ಮಿ ನೋಟ್ 4 ಸ್ಮಾರ್ಟ್‍ಫೋನ್ ವಿಶೇಷಗಳು
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* 2.1 ಗಿಗಾ ಹಡ್ಜ್ ಪ್ರೊಸೆಸರ್
* 13 ಎಂಪಿ ಹಿಂಬದಿ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸ್ವಂತಿ ಕ್ಯಾಮೆರಾ
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ ಓಎಸ್
* 4100 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.




ಇದರಲ್ಲಿ ಇನ್ನಷ್ಟು ಓದಿ :