Widgets Magazine

ಅಂದು ಶತ್ರಗಳು ಇಂದು ಮಿತ್ರರು.. ಇದು ರೀಲ್ ಅಲ್ಲ ರಿಯಲ್!

ವೆಬ್‌ದುನಿಯಾ|
PR
ಕನ್ನಡ ಚಿತ್ರರಂಗದ ಎರಡು ಪ್ರತಿಭೆಗಳು ಮತ್ತೇ ಒಂದಾಗಿವೆ. ಇಬ್ಬರೂ ಒಂದೇ ಸಿನಿಮಾ ಯೂನಿಟ್ ನಲ್ಲಿ ಕೆಲಸ ಮಾಡಿ ಅದಾದ ಬಳಿಕ ಒಬ್ಬರಮೇಲೆ ಒಬ್ಬರು ಕಾರಣ ಒಂದಕ್ಕೆ ಸಿಟ್ಟಾಗಿ ಶರಂಪರ ಜಗಳವಾಡಿ ಟೂ ಬಿಟ್ಟು ಬಿಟ್ಟಿದ್ದರು. ಆದರೇ ಈ ಜೋಡಿ ಪುನಃ ಸೇ ಬಿಟ್ಟು ಒಂದಾಗಿದ್ದಾರೆ. ಆ ಎರಡು ಪ್ರತಿಭೆಗಳೇ ನಿರ್ದೇಶಕ-ನಟ ಎಸ್. ನಾರಾಯಣ್ ಮತ್ತು , ನಟ ದುನಿಯಾ ವಿಜಯ್. ಅವರು ಕುಪ್ಪುಸ್ವಾಮಿ ನಿರ್ಮಿಸುತ್ತಿರುವ ಚಿತ್ರ ಒಂದರಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಸಿನಿಮಾಗೆ ಸಂಬಂಧಪಟ್ಟಂತೆ ಇವರು ಮಾಡಿಕೊಂಡ ಗಲಾಟೆಯನ್ನು ಫಿಲಂ ಚೇಂಬರ್ ಬಗೆ ಹರಿಸಿತ್ತು. ಆ ಬಳಿಕ ಇಬ್ಬರೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಆದರೇ ಮತ್ತೇ ಒಂದಾಗಿದ್ದಾರೆ. ಈ ಚಿತ್ರಕ್ಕೆ ಬಹು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :