Widgets Magazine

ಚಂದ್ರಮೌಳಿ ಚಿತ್ರದಲ್ಲಿ ಸುದೀಪ್ ಆಯುಧ ವ್ಯಾಪಾರಿ

ಬೆಂಗಳೂರು| ವೆಬ್‌ದುನಿಯಾ|
PR
ಇತ್ತೀಚೆಗಷ್ಟೇ 40ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡ ಸುದೀಪ್ಗೆ ವೃತ್ತಿ ಬದುಕಿನಲ್ಲಿ ಮಹತ್ತರ ತಿರುವು ಪಡೆದಿದ್ದು ರಾಜಮೌಳಿ ನಿರ್ದೇಶನದ ಈಗ ಚಿತ್ರದಿಂದ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಈಗ ಮತ್ತೊಮ್ಮೆ ಅವರು ರಾಜಮೌಳಿ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಪಕ್ಕಾ ಆಗಿದೆ. ಅವರ ಪಾತ್ರದ ವೈಶಿಷ್ಟ್ಯಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಪ್ರಭಾಸ್ ನಾಯಕರಾಗಿರುವ ಈ ಚಿತ್ರದಲ್ಲಿ ಸುದೀಪ್ ಮುಖ್ಯವಾದ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾದರೂ ಕಥೆಗೆ ಮಹತ್ತರ ತಿರುವು ನೀಡುವ ಪಾತ್ರ ಅದು ಎನ್ನಲಾಗಿದೆ. ಪಾತ್ರದ ಬಗ್ಗೆ ಸುದೀಪ್ ಕೂಡಾ ಅಷ್ಟೇ ಕುತೂಹಲದಿಂದಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಅವರು ನಾನು ಚಿತ್ರದಲ್ಲಿ ಆಯುಧಗಳ ವ್ಯಾಪಾರಿಯಾಗಿ ಕಾಣಿಸುತ್ತೇನೆ. ಅಲ್ಲಿ ನನ್ನ ಹೆಸರು ಅಸ್ಲಂ ಖಾನ್. ಚಿತ್ರದಲ್ಲಿ ನನ್ನ ಹಾಗೂ ಸತ್ಯರಾಜ್ ನಡುವೆ ಕತ್ತಿಯೊಂದಿಗೆ ಕಾದಾಡುವ ಸನ್ನಿವೇಶವೂ ಇದೆ ಎಂದಿದ್ದಾರೆ. ಬಾಹುಬಲಿ ಚಿತ್ರೀಕರಣ ಮರೆಯಲಾಗದ ಅನುಭವ ಕೊಟ್ಟಿದೆ. ಅದ್ಭುತ ಸೆಟ್ಸ್, ಉತ್ತಮ ಟೀಂ ಅದು. ರಾಜಮೌಳಿ ತಂಡವೇ ಹಾಗಿರುತ್ತದೆ. ಅವರೊಂದಿಗೆ ಕೆಲಸ ಮಾಡುವುದು ಅದೃಷ್ಟ ಎಂದಿದ್ದಾರೆ. ಅನುಷ್ಕಾ ಶೆಟ್ಟಿ ಚಿತ್ರದ ನಾಯಕಿಯಾಗಿದ್ದು ರಾಣಾ, ಅಡಿವಿ ಶೇಷ್ ತಾರಾಗಣದಲ್ಲಿದ್ದಾರೆ. ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಯುತ್ತಿದ್ದು, ಹಿಂದಿ ಮಲೆಯಾಳಂನಲ್ಲೂ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಮಗಧೀರ, ಈಗ ಚಿತ್ರಗಳ ಕ್ಯಾಮೆರಾಮನ್ ಸೆಂಥಿಲ್ಕುಮಾರ್ ಇಲ್ಲೂ ಕೈಚಳಕ ತೋರಲಿದ್ದಾರೆ. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸದ್ಯದಲ್ಲೇ ಟ್ವೀಟ್ ಮಾಡುತ್ತೇನೆ ಎಂದಿದ್ದಾರೆ ಸುದೀಪ್.


ಇದರಲ್ಲಿ ಇನ್ನಷ್ಟು ಓದಿ :