ನಮ್ಮ 'ಪರಸಂಗದ ಗೆಂಡೆತಿಮ್ಮ' ಲೋಕೇಶ್ ನೆನಪು

ಇಳಯರಾಜ|
MOKSHA
ಕನ್ನಡ ಚಿತ್ರರಂಗದಲ್ಲಿ ಎಂಥ ಪಾತ್ರಕ್ಕೂ ಜೀವ ತುಂಬುವ ಕಲಾವಿದರಲ್ಲಿ ಗುರುತಿಸಿಕೊಂಡ ನಟ ನಮ್ಮ ಅರ್ಥಾತ್ ಲೋಕೇಶ್ ಈಗಲೂ ಎಲ್ಲರ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇದೀಗ ಇವರು ನಮ್ಮೊಂದಿಗಿಲ್ಲ. ಆದರೆ ಅವರ ನೆನಪನ್ನು ಮೆಲುಕು ಹಾಕುತ್ತಿದ್ದಾರೆ ಪತ್ನಿ ಗಿರಿಜಾ ಲೋಕೇಶ್ ಹಾಗೂ ಪುತ್ರ ಸೃಜನ್ ಲೋಕೇಶ್.

ನಟನ ನೆನಪು ಅಚ್ಚಳಿಯದೇ ಉಳಿಯಲಿ ಎಂಬ ಕಾರಣಕ್ಕೆ ಪತ್ನಿ ಮಕ್ಕಳು ಸೇರಿ ಅವರ 63ನೇ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಲೋಕೇಶ್ ನೆನಪು ಕಾರ್ಯಕ್ರಮದಲ್ಲಿ ಹುಟ್ಟುಹಬ್ಬದ ಜೊತೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕೂಡ ನಡೆಸಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ನಟಿ ಜಯಂತಿ, ಸಾಹಿತಿ ಚಂದ್ರಶೇಖರ ಕಂಬಾರ, ಹಿರಿಯ ನಟ ಸಿ. ಆರ್. ಸಿಂಹ ಸೇರಿದಂತೆ ಹಲವು ಗಣ್ಯರು ಇದ್ದರು. ನಟಿ ಜಯಂತಿ ಲೋಕೇಶ್ ಅವರ ಅಭಿನಯವನ್ನು ಕೊಂಡಾಡಿದರು. ಸಿ.ಆರ್. ಸಿಂಹ ಅವರಿಗೆ ಲೊಕೇಶ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಇದರಲ್ಲಿ ಇನ್ನಷ್ಟು ಓದಿ :