Widgets Magazine

ಮಾಮು ಟೀ ಅಂಗಡಿಯಲ್ಲಿ ಅತಿಥಿಗಳದ್ದೇ ದರ್ಬಾರ್

ವೆಬ್‌ದುನಿಯಾ|
PR
ಶ್ರೀನಗರ ಕಿಟ್ಟಿ, ಅಜಯ್ರಾವ್, ನೆನಪಿರಲಿ ಪ್ರೇಮ್, ಯೋಗೀಶ್, ಪ್ರಜ್ವಲ್ ದೇವರಾಜ್- ಈ ಐದು ನಾಯಕರು ಮಾಮು ಟೀ ಅಂಗಡಿಯಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರುಗಳು ಹಾಡನ್ನೂ ಹಾಡಿದ್ದಾರೆ. ಬಾಲಿವುಡ್ನ ನೃತ್ಯ ಸಂಯೋಜಕ ಟೆರೆನ್ಸ್ ಲೂಯಿಸ್ ಈ ಅಂಗಡಿಯಲ್ಲಿ ಒಂದು ದಇನ ಇದ್ದು ಹೋಗಿದ್ದಾರೆ. ಬಾಲಿವುಡ್ನಿಂದ ಕಾಜೋಲ್ ಇಲ್ಲವೇ ಬಿಪಾಶಾ ಬಸು ಅವರನ್ನು ಕರೆಸುವ ಇರಾದೆ ಈ ಅಂಗಡಿಯ ತಂಡಕ್ಕಿದೆ.

ನಿದರ್ೇಶಕ ಪರಮೇಶ್ ತಮ್ಮ ಮೊದಲ ಚಿತ್ರದ ತಾರಾಗಣಕ್ಕಿಂತ ಅತಿಥಿ ಕಲಾವಿದರನ್ನೇ ಹೆಚ್ಚು ನೆಚ್ಚಿಕೊಂಡಂತಿದೆ. ವರುಣ್, ರಿತೇಶ್, ಮಹೇಶ್, ವಿಶ್ವ ಎಂಬ ನಾಲ್ಕು ಮಂದಿ ಹೊಸ ಹುಡುಗರಿಗೆ ನಾಯಕ ಪಟ್ಟ ನೀಡಲಾಗಿದೆ. ಅತಿಥಿ ಪಾತ್ರಗಳು ಕಥೆ ಮಧ್ಯೆ ಅಲ್ಲಲ್ಲಿ ಬಂದು ಹೋದರೆ ಕಿಟ್ಟಿ ಆರಂಭದಿಂದ ಅಂತ್ಯದವರೆಗೂ ಇರಲಿದ್ದಾರೆ. ಕಥೆ ನಿರೂಪಿಸುವ ಜವಾಬ್ದಾರಿ ಕಿಟ್ಟಿಗೆ ನೀಡಲಾಗಿದೆ. ಈ ಕಲಾವಿದರೆಲ್ಲರೂ ಸಂಭಾವನೆಯಿಲ್ಲದೆ ನಟಿಸುತ್ತಿದ್ದಾರೆ ಎಂಬುದೇ ನಿರ್ದೇಶಕ ಪರಮೇಶ್ ಅವರಿಗೆ ಸಂತಸ ಸಂಗತಿಯಾಗಿತ್ತು. ಮಾಮು ಟೀ ಅಂಗಡಿಯ ಮಾಲಿಕನಾಗಿ ಹೊನ್ನವಳ್ಳಿ ಕೃಷ್ಣ ಕಾಣಿಸಿಕೊಳ್ಳುತ್ತಾರೆ. ಮಂಗಳೂರು ಮೂಲದವರಾದರೂ ಟೆರೆನ್ಸ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ.

ಲಗಾನ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಿಗೆ ನೃತ್ಯ ಸಂಯೋಜಿಸಿದವರು. ಅಲ್ಲಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎನ್ನುವ ಟೆರೆನ್ಸ್ ಇಲ್ಲಿ ಒಂದು ದಿನದಲ್ಲಿ ಹಲವು ಸನ್ನಿವೇಶ ಚಿತ್ರೀಕರಿಸುತ್ತೇವೆ. ಅಲ್ಲಿ ಒಂದು ದಿನಕ್ಕೆ ಒಂದೇ ದೃಶ್ಯ. ಬಾಲಿವುಡ್ ಇಲ್ಲಿನ ಸಿನೆಮಾ ಮಂದಿಯ ಬದ್ಧತೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದರು.


ಇದರಲ್ಲಿ ಇನ್ನಷ್ಟು ಓದಿ :