ಕನಸುಗಾರ ವಿ. ರವಿಚಂದ್ರನ್ ಅವರನ್ನು ನಿರ್ಮಾಪಕ ಗಂಡುಗಲಿ ಮಂಜು ಒಂದು ಕಡೆಯಿಂದ ಹೊಗಳುತ್ತಲೇ ಟೀಕಿಸುತ್ತಿದ್ದಾರೆ. ಒಂದು ಕಡೆಯಿಂದ ಚಿವುಟುತ್ತಾ, ಇನ್ನೊಂದು ಕಡೆ ತೊಟ್ಟಿಲಲ್ಲಿಟ್ಟು ತೂಗುವ ಯತ್ನದಲ್ಲಿದ್ದಾರೆ. ಸದ್ಯಕ್ಕೆ ಈ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ರವಿಚಂದ್ರನ್ ಬಗ್ಗೆ ಹೀಗೆ ದೂರುತ್ತಿರುವುದು ನಾನೇನು ಮೊದಲಲ್ಲ. ಈ ಹಿಂದೆ ಹಲವರು ಇದೇ ರೀತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇಕಿದ್ದರೆ ನಾರಿಯ ಸೀರೆ ಕದ್ದ, ಮಲ್ಲಿಕಾರ್ಜುನ ಮುಂತಾದ ಚಿತ್ರಗಳ ನಿರ್ಮಾಪಕರನ್ನೇ ಕೇಳಿ ನೋಡಿ. ಇದಕ್ಕಿಂತ ಹೆಚ್ಚು ನಾನೇನೂ ಹೇಳಿಲ್ಲ. ಹೇಳುವುದೂ ಇಲ್ಲ. ಅವರು ದೊಡ್ಡವರು ಅಂತ ಹೇಳಿದ್ದಾರೆ ಮಂಜು. | Ravichandran, K Manju, Kalla Malla Sulla, Kannada film, Karnataka