ಸಿಲ್ಕ್ ಸಖತ್ ಹಾಟ್ ಸದ್ಯದಲ್ಲೇ ರಸಿಕರ ಮುಂದೆ...

ಬೆಂಗಳೂರು, ಗುರುವಾರ, 3 ಏಪ್ರಿಲ್ 2014 (16:18 IST)

ಪಾಕ್ ಬ್ಯೂಟಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಚಿತ್ತಾರ ಬಿಡಿಸಲು ಬಂದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅಪಾರ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳಿವೆ.

ಸಿಲ್ಕ್ ಸಖತ್ ಹಾಟ್ ಚಿತ್ರದಲ್ಲಿ ವೀಣಾ ಅವರ ಭಾವಗಳು ಬಾಲಿವುಡ್ ಚಿತ್ರಗಳನ್ನು ನೆನಪಿಸುವಂತಿದೆ ಎಂದು ಹಲವರು ಹೇಳಿದ್ದಾರಂತೆ. ಹಂತಹಂತವಾಗಿ ಚಿತ್ರದ ಸ್ಟಿಲ್ ಬಿಡುಗಡೆಯಾಗುತ್ತಿದ್ದು, ಕಲಾರಸಿಕ ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ. ಈಗ ಅಂತದ್ದೇ ಮತ್ತಷ್ಟು ಚಿತ್ರಗಳು ಬಿಡುಗಡೆಯಾಗಿವೆ.

ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ವಯಸ್ಕರ ಸರ್ಟಿಫಿಕೇಟ್ ನೀಡಿದೆ. ಅಕ್ಷಯ್ ಈ ಚಿತ್ರದ ಮೂಲಕ ಕನ್ನಡಕ್ಕೆ ಹೊಸ ನಾಯಕರಾಗಿ ಪರಿಚಿತರಾಗುತ್ತಿದ್ದಾರೆ. ಸಾಕಷ್ಟು ಹಣ ಹಾಕಿ ವೀಣಾ ಅವರನ್ನು ಕನ್ನಡಕ್ಕೆ ತರಲಾಗಿದೆ ಎಂಬುದನ್ನು ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳಿರುವುದು ಸಹಜ.

ಇದು ಹಿಂದಿಯ ಡರ್ಟಿ ಪಿಕ್ಚರ್ನ ಕನ್ನಡ ರಿಮೇಕ್ ಅಲ್ಲ ಎಂದು ಚಿತ್ರತಂಡ ಪದೇ ಪದೇ ಹೇಳುತ್ತಿದೆ. ಆದರೆ ಡರ್ಟಿ ಪಿಕ್ಚರ್ನ ಕಥೆಯನ್ನು ಅವರು ಸ್ಪೂರ್ತಿ ಪಡೆದಿರುವಂತೂ ನಿಜ. ಎನ್ನುತ್ತವೆ ಮೂಲಗಳು. ಡರ್ಟಿ ಪಿಕ್ಚರ್ ಎಂದು ಹೆಸರಿಟ್ಟಿದ್ದ ಚಿತ್ರಕ್ಕೆ ಎಕ್ತಾ ಕಪೂರ್ ದಾವಾ ಹೂಡಿದ ಬಳಿಕ ಇದಿಗ ಚಿತ್ರದ ಹೆಸರು ಸಿಲ್ಕ್ ಸಖತ್ ಹಾಟ್ ಎಂದು ಬದಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :