ಹಾಟ್ ವೀಣಾ ಮಲಿಕ್‌ಳ ಹಾಟ್ ನೋವಿನ ವಿಷ್ಯ ...

ಗುರುವಾರ, 3 ಏಪ್ರಿಲ್ 2014 (19:32 IST)

ಸಿಲ್ಕ್ ಸಕತ್ ಹಾಟ್ ಮಗ ಸಿನಿಮಾದಲ್ಲಿ ತನ್ನ ರೂಪರಾಶಿಯನ್ನು ತೆರೆದಿಟ್ಟ ವೀಣಾಮಲಿಕ್ ಪಡ್ಡೆಗಳ ಮಾತ್ರವಲ್ಲ ಪಾಪದ ಗೃಹಿಣಿಯರ ನಿದ್ದೆ ಹಾಳು ಮಾಡಿದ ಸೆಕ್ಸಿ ಡಾಲ್. ಈಗ ಆ ಚಿತ್ರ ಶತದಿನದ ಖುಷಿಯಲ್ಲಿದೆ.

ತಮ್ಮ ರೂಪವನ್ನು ತೆರೆಯ ಮೇಲೆ ಚಲ್ಲಿ ಮನೆ-ಮನಗಳಲ್ಲಿ ತಳಮಳ ಎಬ್ಬಿಸಿರುವ ಮತ್ತೊಬ್ಬ ಮಾದಕ ಬೊಂಬೆ ಮಲ್ಲಿಕಾ ಶರಾವತ್ ಈಗ ಖಾಸಗಿ ಚಾನೆಲ್ ಒಂದರಲ್ಲಿ ನಾನು ಮದ್ವೆ ಆಗ್ತೀನಿ ಅಂತ ರಿಯಾಲಿಟಿ ಷೋ ಮೂಲಕ ಗಂಡು ಹುಡುಕ್ತಾ ಇದ್ದಾರೆ. ಭಾಗಶಃ ಮದುವೆ ಗ್ಯಾರೆಂಟಿ.

ಪಾಪದ ರಸಿಕ ಅಭಿಮಾನಿಗಳಿಗೆ ಆ ದುಃಖ ತಡೆದು ಕೊಳ್ಳುವುದಕ್ಕೆ ಆಗದ ಸಮಯದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಹಾಟ್ ಮಗ ವೀಣಾ ಮಲಿಕ್ ಮದ್ವೆ ಆಗೋಕೆ ಸಿದ್ಧ ಆಗ್ತಾ ಇದಾರಂತೆ. ಹೌದು ಅನ್ನುತ್ತೆ ಒಂದು ಮೂಲ, ಆಕೆ ಮದುವೆ ಆಗ್ತಾ ಇರುವ ಹುಡುಗ ದುಬೈ ಮೂಲದವನಂತೆ. ವೈವಾಹಿಕ
ಬಾಂಧವ್ಯಕ್ಕೆ ನಾನು ಜಾಸ್ತಿ ಪ್ರಾಮುಖ್ಯತೆ ನೀಡ್ತೀನಿ. ಬದುಕಲ್ಲಿ ಎಷ್ಟು ದಿನ ನಾನು ಹೀಗೆ ಓಡಾಡಿಕೊಂಡಿರೋದು ! ಒಂದು ಕಡೆ ಸೆಟಲ್ ಆಗಿ ಬಿಡುವ ಅಂತ ನಿರ್ಧರಿಸಿದ್ದೀನಿ ಅಂತ ಹೇಳಿದ್ದಾರೆ ವೀಣಾ.ಯಾಕೋ ವಿಷ್ಯ ತುಂಬಾ ಬಿಸಿಯಾಗಿದೆ ಅಲ್ವೇ?ಇದರಲ್ಲಿ ಇನ್ನಷ್ಟು ಓದಿ :