'ಪ್ಯಾರ್ಗೆ ಆಗ್ಬುಟ್ಟೈತೆ' ಮೇಲೆ ಕೋಮಲ್‌ಗೆ ಕೋಪ..!

ನಾಗರಾಜ ಬಿ.|
SUJENDRA

'ಪ್ಯಾರ್ಗೆ ಆಗ್ಬುಟ್ಟೈತೆ' ಹಾಡು ಹಿಟ್ ಆಗಿದ್ಯಲ್ಲ. ಇನ್ನೂ ಯಾಕೆ 'ಗೋವಿಂದಾಯ ನಮಃ' ಚಿತ್ರವನ್ನು ಬಿಡುಗಡೆ ಮಾಡ್ತಿಲ್ಲ? ಇಲ್ಲದ ಕಾರಣಗಳನ್ನು ಕೊಟ್ಟು ರಿಲೀಸ್ ಮುಂದಕ್ಕೆ ಹಾಕ್ತಿರೋದು ಯಾಕೆ? ಹೀಗೆಂದು ನಿರ್ಮಾಪಕ ಕೆ.ಎ. ಸುರೇಶ್ ಸುರೇಶ್ ಮೇಲೆ ಕೋಪ ಮಾಡಿಕೊಂಡಿರುವುದು ನಾಯಕ ಕೋಮಲ್ ಕುಮಾರ್!

ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ನನ್ನ ಪಾಲಿನ ಡಬ್ಬಿಂಗ್ ಕಾರ್ಯವನ್ನು ನಾನು ಕಳೆದ ಆಗಸ್ಟ್‌ನಲ್ಲಿ ಮುಗಿಸಿದ್ದೆ. 'ಪ್ಯಾರ್ಗೆ ಆಗ್ಬುಟ್ಟೈತೆ' ಹಾಡಿಗೆ ಯೂಟ್ಯೂಬಿನಲ್ಲಿ ಸರಿಸುಮಾರು ಏಳು ಲಕ್ಷ ಹಿಟ್ ಸಿಕ್ಕಿದೆ. ಎಲ್ಲಾ ಟಿವಿ ಚಾನೆಲ್‌ಗಳು ಸಾಕಷ್ಟು ಪ್ರಚಾರವನ್ನೂ ಕೊಟ್ಟಿವೆ. ಕರ್ನಾಟಕದ ಬಹುತೇಕ ಮಂದಿಗೆ ಈಗ ಈ ಹಾಡು ಗೊತ್ತು. ಅದನ್ನು ಇಷ್ಟಪಟ್ಟಿದ್ದಾರೆ.
ಇದನ್ನೇ ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳುವುದು ಬಿಟ್ಟು ಪಿಳ್ಳೆ ನೆವಗಳನ್ನು ನಿರ್ಮಾಪಕರು ಮುಂದಿಡುತ್ತಿದ್ದಾರಂತೆ. ಹಾಗಂತ ಕೋಮಲ್ ಆರೋಪಿಸಿದ್ದಾರೆ.

ತಮ್ಮ ಕೆಲಸ ಮುಗೀತಲ್ಲ, ಬಿಡುಗಡೆ ಚಿಂತೆ ನಿಮಗ್ಯಾಕೆ? ಅದನ್ನು ನಿರ್ಮಾಪಕರು ನಿರ್ಧರಿಸಲಿ ಬಿಡಿ ಅಂತ ಕೋಮಲ್‌ಗೆ ಯಾರೂ ಹೇಳುವಂತಿಲ್ಲ. ಯಾಕೆಂದರೆ ಈ ಚಿತ್ರಕ್ಕೆ ಕೋಮಲ್ ಸಂಭಾವನೆಯನ್ನೇ ಪಡೆದಿಲ್ಲ. ಹಾಗೆಂದು ಉಚಿತವಾಗಿ ನಟಿಸಿದ್ದಾರೆ ಎಂದು ಉದಾರಿ ಎಂದು ತಿಳಿದುಕೊಳ್ಳಬೇಡಿ.
'ಗೋವಿಂದಾಯ ನಮಃ' ಚಿತ್ರದ ವಿತರಣೆ ಹಕ್ಕುಗಳು ಕೋಮಲ್ ಜೇಬಿನಲ್ಲಿವೆ. ಸಂಭಾವನೆ ಬದಲು ಅವರು ಈ ಮಾರ್ಗವನ್ನು ಅನುಸರಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹೈದರಾಬಾದ್ ಕರ್ನಾಟಕಗಳ ಹಕ್ಕುಗಳು ಕೋಮಲ್‌ರಲ್ಲಿವೆ. ಅಂದರೆ ಸುಮಾರು 18 ಚಿತ್ರಮಂದಿರಗಳಿಂದ ಬರುವ ಆದಾಯ ಸಿಗಲಿದೆ.

ಅದಕ್ಕೆ ಪೆಟ್ಟು ಬೀಳುತ್ತಿದೆ ಅನ್ನೋ ಕಾರಣದಿಂದಲೇ ಕೋಮಲ್ ನಿರ್ಮಾಪಕ ಸುರೇಶ್ ಮೇಲೆ ಮುಗಿ ಬಿದ್ದಿದ್ದಾರೆ. ಕೋಮಲ್ ಆರೋಪಕ್ಕೆ ನಿರ್ದೇಶಕ ಪವನ್ ಒಡೆಯರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಇದರಲ್ಲಿ ಇನ್ನಷ್ಟು ಓದಿ :